ರಾಯಚೂರಿನ ಇಂಡಿಯನ್ ಆಯಿಲ್ ಪೆಟ್ರೋನಸ್ ಪ್ರೈ.ಲಿ ಗ್ಯಾಸ್ ಬಂಕ್ ಬಂದ್ ಮಾಡಲಾಗಿರುವುದು.
ರಾಯಚೂರು ಗ್ಯಾಸ್ ಸಿಲಿಂಡರ್ ಅಭಾವದ ಬೆನ್ನಲ್ಲೇ ನಗರದಲ್ಲಿ ಆಟೋ ಎಲ್ಪಿಜಿ ಅಭಾವ ಉಂಟಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದಿಂದ ಇಲ್ಲಿನ ಅನೇಕ ಹೋಟೆಲ್ಗಳು ಬಂದ್‌ನ ನಂತರ ಇದೀಗ ಆಟೋ ಎಲ್ಪಿಜಿ ಸಿಗದೆ ಗೋ ಗ್ಯಾಸ್ ಬಂಕ್‌ಗಳು ಬಂದ್ ಮಾಡಲಾಗಿದೆ.
ಕೊಲ್ಲಿದೇಶಗಳ ಯುದ್ದದ ಎಫೆಕ್ಟ್‌ನಿಂದ ಈ ಎಲ್‌ಪಿಜಿ ಗ್ಯಾಸ್ ಬಂಕ್‌ಗಳು ಬಂದ್‌ಅಗಿದ್ದು, ಗ್ಯಾಸ್ ಇಲ್ಲದೆ ನಿರುದ್ಯೋಗಿಗಳಾಗುತ್ತಿರುವ ಆಟೋರಿಕ್ಷಾ ಚಾಲಕರು ಎಲ್ಪಿಜಿ ಗ್ಯಾಸ್ ಬಂಕ್‌ಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.
ಗ್ಯಾಸ್ ಬಂದಾಗ ತುಂಬಿಸಿಕೊಳ್ಳಲು ಆಟೋ ರಿಕ್ಷಾ ಚಾಲಕರು ಕಾಯುತ್ತಿದ್ದಾರೆ. ಬೆಲೆ ಏರಿಕೆ ಬೆನ್ನಲ್ಲೆ ಗ್ಯಾಸ್ ನೋ ಸ್ಟಾಕ್ ಬೋರ್ಡ್‌ನಿಂದ ಆಟೋ ಚಾಲಕರು ಆತಂಕದಲ್ಲಿದ್ದಾರೆ.
ನಗರದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋನಸ್ ಪ್ರೈ.ಲಿ, ಗೋ ಗ್ಯಾಸ್, ಯುಎಸ್‌ಕೆ ಮೂರು ಬಂಕ್‌ಗಳು ಸ್ಟಾಕ್ ಇಲ್ಲದೆ ಬಂದ್ ಆಗಿವೆ. ಮಾರ್ಚ್ ತಿಂಗಳಲ್ಲಿ ಎಲ್‌ಪಿಜಿ ಗ್ಯಾಸ್ ಬೆಲೆ ಲೀಟರ್‌ಗೆ ಸುಮಾರು 25 ರೂಪಾಯಿ ಏರಿಕೆಯಾಗಿದೆ. 60 ರೂ. 80 ಪೈಸೆ ಇದ್ದ ಬೆಲೆ 85 ರೂಪಾಯಿವರೆಗೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ಹೊಸ ಸ್ಟಾಕ್ ಬಂದಾಗ ಇನ್ನೂ ಬೆಲೆ ಏರಿಕೆಯಾಗುವ ಆತಂಕದಲ್ಲಿ ಆಟೋ ಚಾಲಕರಿದ್ದಾರೆ.