ಸಿಂಧನೂರಿನ ನಟರಾಜ ಕಾಲನಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು. ನಗರಸಭೆಯ ಪರಿಸರ ಇಂಜನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕರಾದ ಕಿಶನ್‌ರಾವ್, ವೆಂಕಟೇಶಕುಮಾರ ಇತರರಿದ್ದರು.  
ರಾಯಚೂರು

ಕಸ ವಿಂಗಡಿಸದಿದ್ದರೆ ನಳ ಸಂಪರ್ಕ ಕಡಿತ

ನರೇಶ್ ಕುಮಾರ್
ಸಿಂಧನೂರು: ಇಲ್ಲಿನ 11ನೇ ವಾರ್ಡ್ ನಟರಾಜ್ ಕಾಲನಿಯಲ್ಲಿ ನಗರಸಭೆಯಿಂದ ಘನತ್ಯಾಜ್ಯ ವಸ್ತು ನಿರ್ವಹಣೆ-2026ರ ನಿಯಮಗಳ ಅನುಷ್ಠಾನ ಕುರಿತು ಶನಿವಾರ ಜಾಗೃತಿ ಅಭಿಯಾನ ನಡೆಯಿತು. 
ಪೌರಾಯುಕ್ತ ಪಾಂಡುರಂಗ ಇಟಗಿ ಮಾತನಾಡಿ, ತ್ಯಾಜ್ಯವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸುವ ಮೂಲಕ ನಗರಸಭೆ ವಾಹನಕ್ಕೆ ನೀಡಬೇಕು. ತ್ಯಾಜ್ಯ ವಿಂಗಡಣೆ ಕಡ್ಡಾಯವಾಗಿದ್ದು, ಬೇರ್ಪಡಿಸದೆ ನೀಡಿದರೆ ನಿಯಮಗಳ ಪ್ರಕಾರ ಮನೆಗಳ ವಿದ್ಯುತ್ ಮತ್ತು ನಳ ಸಂಪರ್ಕ ಕಡಿತಗೊಳಿಸಲಾಗುವುದು. 
ನಗರದ ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ ಎಂಬುದನ್ನು ಮರೆಯಬಾರದು. ಎಲ್ಲೆಂದರಲ್ಲಿ ಘನತ್ಯಾಜ್ಯ ವಸ್ತುಗಳನ್ನು ಎಸೆಯಬಾರದು ಎಂದು ಮನವಿ ಮಾಡಿದರು. ನಂತರ ಪ್ರತಿ ಮನೆಗೆ ತೆರಳಿ ಘನತ್ಯಾಜ್ಯ ನಿಯಮ-2026 ಸ್ಟಿಕ್ಕರ್ ಮತ್ತು ಕರಪತ್ರವನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಪರಿಸರ ಇಂಜಿನಿಯರ್ ಚೇತನಕುಮಾರ, ಆರೋಗ್ಯ ನಿರೀಕ್ಷಕರಾದ ಕಿಶನ್ ರಾವ್, ಹಣಮಂತ ಯಾದವ, ವೆಂಕಟೇಶ ಕುಮಾರ, ಲಕ್ಷ್ಮೀಪತಿ, ಲಿಂಗರಾಜ ಇತರರಿದ್ದರು.