ರಾಯಚೂರಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಿಗೆ ಆಹಾರ ಪೂರೈಕೆ ಮಾಡಿರುವ ಏಜೆನ್ಸಿಗೆ ಬಾಕಿ ಹಣ ಪಾವತಿ ಮಾಡದ ನಿಮಿತ್ತ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪೀಠೋಪಕರಣಗಳನ್ನು ಮಂಗಳವಾರ ವಕೀಲರ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.
ರಾಯಚೂರು ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ನಿಲಯಗಳಿಗೆ ಆಹಾರ ಪೂರೈಕೆ ಮಾಡಿರುವ ಏಜೆನ್ಸಿಗೆ ಬಾಕಿ ಹಣ ಪಾವತಿ ಮಾಡದ ನಿಮಿತ್ತ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ ಮೇರೆಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪೀಠೋಪಕರಣಗಳನ್ನು ಮಂಗಳವಾರ ವಕೀಲರ ನೇತೃತ್ವದಲ್ಲಿ ಜಪ್ತಿ ಮಾಡಲಾಯಿತು.
ವಸತಿ ನಿಲಯಗಳಿಗೆ ಆಹಾರ ಪೂರೈಸಿರುವ ಪದ್ಮಾವತಿ ಎಂಟರ್‌ಪ್ರೈಸಸ್ ಎಂಬ ಸಂಸ್ಥೆಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ 2 ಕೋಟಿ ರೂ.ಗೂ ಅಧಿಕ ಹಣ ಪಾವತಿಗೆ ನ್ಯಾಯಾಲಯ ಸೂಚಿಸಿದ್ದರೂ ಪಾವತಿಸದೇ ಇರುವದರಿಂದ ಚಿರಆಸ್ತಿ ಜಪ್ತಿ ಮಾಡಲಾಯಿತು.
ಮೊದಲ ಟೆಂಡರ್ ಷರತ್ತಿನಿಂದ 32.51 ಲಕ್ಷ ರೂ ಮೌಲ್ಯದ ಆಹಾರ ಪೂರೈಸಲಾಗಿದ್ದು, ಆದರೆ ಇಲಾಖೆಯಿಂದ 16 ಲಕ್ಷ ರೂ.ಮಾತ್ರ ಪಾವತಿಸಿದ್ದು, ಉಳಿದ ಹಣ ಬಡ್ಡಿ ಸಮೇತ ಪಾವತಿಸದೇ ಇರುವ ಕುರಿತ ಪದ್ಮಾವತಿ ಎಂಟರ್‌ಪ್ರೈಸೆಸ್ ನ್ಯಾಯಾಲಯ ಮೊರೆ ಹೋಗಿತ್ತು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಬಾಕಿ ಹಣಪಾವತಿಸಲು ಸೂಚಿಸಲಾಯಿತು. ಅದೇ ರೀತಿ ಮತ್ತೊಂದು ಪ್ರಕರಣದಲ್ಲಿ 1.87 ಕೋಟಿ ರೂ ಬಾಕಿ ಸಂದಾನ ಮಾಡಲಾಗಿತ್ತು.
ಆ ಹಣವೂ ಪಾವತಿಸದೇ ನಿರ್ಲಕ್ಷ್ಯವಹಿಸಿದ್ದರಿಂದ ನ್ಯಾಯಾಲಯಕ್ಕೆ ಮತ್ತೊಂದು ಅರ್ಜಿ ಸಲ್ಲಿಸಿದ್ದು ನ್ಯಾಯಾಲಯ ಆದೇಶ ಪಾಲನೆ ಮಾಡದೇ ಇರುವದಿರಂದ ಪೀಠೋಪಕರಣ ಜಪ್ತಿ ಮಾಡಲಾಗಿದೆಂದು ನ್ಯಾಯವಾದಿ ಆರ್.ಭೀಮಣ್ಣ ಹೊಸೂರು ತಿಳಿಸಿದರು.