ಬಾಗಲವಾಡದ ಸಮೀಪದ ಲಕ್ಷ್ಮೀ ಕ್ಯಾಂಪ್‌ನ ಪಿರಮಿಡ್ ಕೇಂದ್ರದಲ್ಲಿ ಶಿವರಾತ್ರಿ ನಿಮಿತ್ತ ಶಿವಧ್ವಜರೋಹಣ ನೆರವೇರಿಸಲಾಯಿತು. ಮಾನ್ವಿಯ ಶಿವಶಕ್ತಿ ಕೇಂದ್ರದ ಸಂಚಾಲಕರಾದ ಮಂಜುನಾಥ, ಅಕ್ಕಮ್ಮ, ಬಾಗಲವಾಡ ಪಿರಮಿಡ್‌ನ ಮಾತಾ ಸಾವೀತ್ರಮ್ಮ ಚಂದ್ರರಡ್ಡಿ ಪ್ರಮುಖರಾದ ಅಮರೇಶ ದೇಸಾಯಿ, ಶಾಂತಮ್ಮ, ಬಸಮ್ಮ, ನಾಗರಾಜ ಇತರರಿದ್ದರು. 
ರಾಯಚೂರು

ಶಿವರಾತ್ರಿ ಆಚರಣೆಯಿಂದ ಮುಕ್ತಿ

ಪ್ರಮುಖ ಮುಖ್ಯಾಂಶಗಳು

  • ಶಿವರಾತ್ರಿ ಆಚರಣೆ

ಶಿವರಾತ್ರಿ ಆಚರಣೆಯಿಂದ ಮುಕ್ತಿ

ಕವಿತಾಳ: ಶಿವ ನಂಬಿದ ಭಕ್ತರಿಗೆ ಬೇಡಿದ್ದನ್ನು ಕೊಡುವ ದೇವರು. ಶಿವರಾತ್ರಿ ಹಿಂದುಗಳ ಪಾಲಿಗೆ ಪವಿತ್ರ ರಾತ್ರಿಯಾಗಿದ್ದು, ಶ್ರದ್ಧೆಭಕ್ತಯಿಂದ ಶಿವರಾತ್ರಿ ಆಚರಿಸಿದರೆ ಮುಕ್ತಿ ಸಿಗುತ್ತದೆ ಎಂದು ಮಾನ್ವಿಯ ಶಿವಶಕ್ತಿ ಕೇಂದ್ರದ ಸಂಚಾಲಕ ಮಂಜುನಾಥ ಹೇಳಿದರು.
ಸಮೀಪದ ಲಕ್ಷ್ಮೀಕ್ಯಾಂಪ್‌ನಲ್ಲಿರುವ ಶಿವಶಕ್ತಿ ಪಿರಮಿಡ್ ಕೇಂದ್ರದಲ್ಲಿ ಶಿವರಾತ್ರಿ ನಿಮಿತ್ತ ಮಾನ್ವಿಯ ಒಂ ಮಂಡಳಿ ಶಿವಶಕ್ತಿ ಅವತಾರ ಸೇವಾ ಸಂಸ್ಥಾನ ಮತ್ತು ಬಾಗಲವಾಡ ಪಿರಮಿಡ್ ಕೇಂದ್ರ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನ್ವಿಯ ಶಿವಶಕ್ತಿ ಕೇಂದ್ರದ ಸಂಚಾಲಕರಾದ ಅಕ್ಕಮ್ಮ ಮತ್ತು ಮಂಜುನಾಥ ಶಿವಧ್ವಜರೋಹಣ ನೆರವೇರಿಸಿದರು. ಸಂಚಾಲಕಿ ಅಕ್ಕಮ್ಮ ಮಾತಾ ಓಂ ನಾಮದ ಮಹತ್ವವನ್ನು ತಿಳಿಸಿದರು. ಬಾಗಲವಾಡ ಪಿರಮಿಡ್‌ನ ಮಾತಾ ಸಾವೀತ್ರಮ್ಮ ಚಂದ್ರರಡ್ಡಿ, ಅಮರೇಶ ದೇಸಾಯಿ, ಶಾಂತಮ್ಮ, ಬಸಮ್ಮ, ನಾಗರಾಜ ಇತರರಿದ್ದರು.