ವಾಡಿ -ಗುಂತಕಲ್ ಮಧ್ಯೆದಸದ್ಯದ ದ್ವಿಪಥವನ್ನು ಚತುಷ್ಪಥ ಹಳಿಗಳನ್ನು ಮಾಡಲು ಕೇಂದ್ರ ಸರ್ಕಾರ ಇಚೇಗೆ ಅನುಮೊದನೆ ನೀಡಿದ್ದು ಸಮೀಕ್ಷೆ ಪ್ರಾರಂಭವಾಗಿದೆ. ಒಟ್ಟು 230 ಕಿಮೀ. ಮಾರ್ಗಕ್ಕೆ 23,437 ಕೋಟಿ ರೂ. ಮೀಸಲಿಡಲಾಗಿದೆ. ಇದರಿಂದ ಸರಕು ಸಾಗಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಮತ್ತು ಪ್ರಯಾಣಿಕ ರೈಲುಗಳ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ವಿ.ಸೋಮಣ್ಣ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಬೆಂಗಳೂರು. 
ರಾಯಚೂರು

ವಾಡಿ-ಗುಂತಕಲ್ ಮಾರ್ಗಕ್ಕೆ ಚತುಷ್ಪಥ ಹಳಿ

ಪ್ರಮುಖ ಮುಖ್ಯಾಂಶಗಳು

  • ವಾಡಿ-ಗುಂತಕಲ್ ಮಾರ್ಗಕ್ಕೆ ಚತುಷ್ಪಥ ಹಳಿ
  • ಕೇಂದ್ರದಿಂದ 23,437 ಕೋಟಿ ರೂ. ಮೀಸಲು
  • ಸರಕು ಹಾಗೂ ಪ್ರಯಾಣಿಕ ಹೆಚ್ಚಳಕ್ಕೆ ಕೇಂದ್ರ ರೈಲ್ವೆ ಗಮನ
ರಾಯಚೂರು
ವಾಡಿ -ಗುಂತಕಲ್ ಮಧ್ಯೆ ಸದ್ಯದ ಬ್ರಾಡ್ ಗೇಜ್ ಡಬಲ್ ಲೈನ್ (ದ್ವಿಪಥ) ವನ್ನು ಮತ್ತೆರಡು ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಇಚೇಗೆ ಅನುಮೊದನೆ ನೀಡಿದ್ದು, ಇದರಿಂದ ಸರಕು ಸಾಗಣೆಗೆ ವೇಗ ಹೆಚ್ಚಳ ಆಗಲಿದ್ದು, ದಕ್ಷಿಣ ಮಧ್ಯ ರೈಲ್ವೆಗೆ ಆರ್ಥಿಕತೆ ಬಲಿಷ್ಟಗೊಳ್ಳಲು ಪೂರಕವಾಗಿದೆ.

ಬ್ರಿಟಿಷ್ ಆಳ್ವಿಕೆಯಲ್ಲಿ ನಿರ್ಮಾಣಗೊಂಡ ವಾಡಿ -ಗುಂತಕಲ್ ಬ್ರಾಡ್ ಗೇಜ್ ಡಬಲ್ ಲೈನ್ ಮೂಲಕ ನಿತ್ಯ ನೂರಾರು ರೈಲುಗಳು ಸಂಚಾರ ಮಾಡುತ್ತವೆ. ಈ 230 ಕೀ.ಮೀ ಮಾರ್ಗವನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಇಚೇಗೆ ಅನುಮೋದನೆ ನೀಡಿದ್ದು, ಪ್ರಧಾನ ಮಂತ್ರಿಗಳ ಗತಿಶಕ್ತಿ ಮಾಸ್ಟರ್ ಪ್ಲಾನ್ ಅನುಸರಿಸಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ವಿವಿಧ ರೈಲು ಮಾರ್ಗಗಳನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸಲು ಮತ್ತು ಬಹುಮಾದರಿ ಸಂಪರ್ಕ, ಲಾಜಿಸ್ಟಿಕಲ್ ದಕ್ಷತೆಯನ್ನು ಹೆಚ್ಚಿಸಲು ಮುಂದಾಗಿರುವ ಜತೆಗೆ ಸಮೀಕ್ಷೆ ಪ್ರಾರಂಭ ಮಾಡಲಾಗಿದೆ.

ಕೇಂದ್ರದಿಂದ 23,437 ಕೋಟಿ ರೂ. ಮೀಸಲು
ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿ ಪ್ರಸ್ತುತ ಬ್ರಾಡ್ ಗೇಜ್ ಡಬಲ್ ಲೈನ್‌ನಲ್ಲಿ ನಿತ್ಯ ನೂರಾರು ರೈಲುಗಳು ಸಂಚಾರ ಮಾಡುತ್ತಿರುವುದರಿಂದ ಸರಕು ಹಾಗೂ ಪ್ರಯಾಣಿಕರು ನಿಗದಿತ ಸಮಯಕ್ಕೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚಾರಿಸಲು ಸಮಸ್ಯೆಯಾಗುತ್ತಿರುವುದರಿಂದ ಕಳೆದ ಜನವರಿ ತಿಂಗಳಿನಲ್ಲಿ ಕೇಂದ್ರದ ನೆೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್(ಎನ್‌ಪಿಜಿ)ನವರು ಸಭೆ ನಡೆಸಿ ದೇಶದ ಏಳು ಪ್ರಮುಖ ರೈಲು ಮಾರ್ಗಗಳನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸಲು ಮುಂದಾಗಿತ್ತು. ಮೊದಲನೇ ಅಂತದಲ್ಲಿ ವಾಡಿ -ಗುಂತಕಲ್ ಮಧ್ಯೆದ 230 ಕಿಮೀ. ಮಾರ್ಗಕ್ಕೆ ಚತುಷ್ಪಥ ಹಳಿ ನಿರ್ಮಾಣ ಮಾಡಲು ಕೇಂದ್ರದಿಂದ ಒಟ್ಟು 23,437 ಕೋಟಿ ರೂ. ಅನುದಾನ ಮೀಸಲಿಡುವುದರ ಜತೆಗೆ ಸಮೀಕ್ಷೆಯಲ್ಲು ರೈಲ್ವೆ ಇಲಾಖೆಯ ಅಧಿಕಾರಿಗಳು ಪ್ರಾರಂಭ ಮಾಡಿದ್ದಾರೆ.


ಸರಕು ಸಾಗಣೆಗೆ ಅನುಕೂಲ
ಗುಂತಕಲ್-ವಾಡಿ ಮಾರ್ಗವನ್ನು ನಾಲ್ಕು ಮಾರ್ಗಗಳಾಗಿ ಪರಿವರ್ತಿಸುವ ಮೂಲಕ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರ ಸಂಚಾರದ ಜತೆಗೆ ಸರಕು ಸಾಗಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲು ಮತ್ತು ಪ್ರಯಾಣಿಕ ರೈಲುಗಳ ವೇಗವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ರೈಲ್ವೆ ಮಾರ್ಗಗಳ ಸಂಪರ್ಕವನ್ನು ಹೆಚ್ಚಿಸುವ ಮತ್ತು ಕಲ್ಲಿದ್ದಲು, ಉಕ್ಕು, ಸಿಮೆಂಟ್, ಗ್ರಾನೈಟ್, ಬಾಕ್ಸೈಟ್ ಖನಿಜಗಳು ಮತ್ತು ಸರಕುಗಳನ್ನು ವಿದ್ಯುತ್, ಸಿಮೆಂಟ್ ಮತ್ತು ಇತರ ಕೈಗಾರಿಕಾ ಕೇಂದ್ರಗಳಿಗೆ ಸಾಗಿಸುವ ಮೂಲಕ ಲಾಭ ಗಳಿಸುವ ಗುರಿಯೊಂದಿಗೆ ರೈಲ್ವೆ ಈ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಜೆಎಸ್‌ಡಬ್ಲ್ಯೂ, ಕಲ್ಯಾಣಿ ಸ್ಟೀಲ್ಸ್, ಅಲ್ಟ್ರಾ ಟೆಕ್ ಸಿಮೆಂಟ್ಸ್, ಎಸಿಸಿ ಸಿಮೆಂಟ್ಸ್ ಮತ್ತು ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿಎಲ್)ಗಳಿಗೆ ಸರಕು ಸಾಗಣೆ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು. 2031ರ ವೇಳೆಗೆ ನಾಲ್ಕು ಪಟ್ಟು ರೈಲು ಮಾರ್ಗ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಿದೆ.