ಸಿರವಾರ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಶಾಸಕ ಜಿ.ಹಂಪಯ್ಯ ನಾಯಕ ಅವರು ಸಿರವಾರ-ಬೆಂಗಳೂರು ಸ್ಲೀಪರ್ ಬಸ್‌ಗೆ ಹಸಿರು ನಿಶಾನೆ ತೋರಿದರು. ಪಪಂ ಸದಸ್ಯರಾದ ಮೌಲಸಾಬ್ ವರ್ಚಸ್, ಸೂರಿ ದುರಗಣ್ಣ ನಾಯಕ, ಹಸೇನ್ ಅಲಿ ಸಾಬ್ ಇತರರಿದ್ದರು. 
ರಾಯಚೂರು

ಬಸ್ ಡಿಪೋ ಕಟ್ಟಡಕ್ಕೆ ಶೀಘ್ರ ಶಂಕುಸ್ಥಾಪನೆ

ಸಿರವಾರ: ಈ ಭಾಗದ ಜನರ ಬಹುದಿನಗಳ ಬೇಡಿಕೆಯಂತೆ ಸಾರಿಗೆ ಸಂಸ್ಥೆಯಿಂದ ಸಿರವಾರ-ಬೆಂಗಳೂರು ಸ್ಲೀಪರ್ ಬಸ್ ಸೌಲಭ್ಯ ಕಲ್ಪಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಸಿರವಾರ-ಬೆಂಗಳೂರು ಸ್ಲೀಪರ್ ಬಸ್‌ಗೆ ಚಾಲನೆ ನೀಡಿ ಮಾತನಾಡಿದರು. ಇನ್ನೂ ಎರಡು ಮಾರ್ಗಗಳಿಗೆ ಶೀಘ್ರವೇ ಬಸ್‌ಗಳನ್ನು ಬಿಡಲಾಗುವುದು. ಸಿರವಾರದಲ್ಲಿ ಬಸ್ ಡಿಪೋ ಸ್ಥಾಪಿಸಲು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಆದಷ್ಟು ಬೇಗ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಪಪಂ ಸದಸ್ಯರಾದ ಮೌಲಸಾಬ್ ವರ್ಚಸ್, ಸೂರಿ ದುರಗಣ್ಣ ನಾಯಕ, ಹಸೇನ್ ಅಲಿ ಸಾಬ್, ಹಾಜಿ ಚೌದ್ರಿ, ಮಾರ್ಕಂಡಪ್ಪ, ಮುಖಂಡರಾದ ಕಲ್ಲೂರು ಬಸವರಾಜ ನಾಯಕ, ಚನ್ನಬಸವ ಜಿ., ಶಿವರಾಜಗೌಡ ಬೆಳವಿನೂರು, ರಂಗನಾಥ ಇತರರಿದ್ದರು.