ರಾಯಚೂರಿನ ಓಪೆಕ್ ಆಸ್ಪತ್ರೆ ಬಳಿ ಅನಧಿಕೃತವಾಗಿ ಹಾಕಲಾಗಿರುವ ಡಬ್ಬಿ ಅಂಗಡಿ ಗಳ ತೆರವುಗೊಳಿಸಲು ಹೋದ ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನು ತಡೆದು ಪಾಲಿಕೆ ಮಾಜಿ ಸದಸ್ಯ ನರಸರೆಡ್ಡಿ ಸೋಮವಾರ ಅಡ್ಡಿಪಡಿಸಿರುವುದು. 
ರಾಯಚೂರು

ಡಬ್ಬಿ ಅಂಗಡಿಗಳ ಮಾಜಿ ಸದಸ್ಯ ಅಡ್ಡಿ

ರಾಯಚೂರು ನಗರದ ಓಪೆಕ್ ಆಸ್ಪತ್ರೆ ಬಳಿ ಅನಧಿಕೃತವಾಗಿ ಹಾಕಲಾಗಿರುವ ಡಬ್ಬಿ ಅಂಗಡಿಗಳ ತೆರವುಗೊಳಿಸಲು ಹೋದ ಮಹಾನಗರ ಪಾಲಿಕೆ ಸಿಬ್ಬಂದಿಗಳನ್ನು ತಡೆದು ಪಾಲಿಕೆ ಮಾಜಿ ಸದಸ್ಯ ನರಸರೆಡ್ಡಿ ಸೋಮವಾರ ಅಡ್ಡಿಪಡಿಸಿದ್ದಾರೆ.
ಆಸ್ಪತ್ರೆ ಎದುರುಗಡೆ 11 ಕೆವಿ ವಿದ್ಯುತ್ ಲೈನ್ ಮಾರ್ಗದಲ್ಲಿ ಟೀನ್ ಶೆಡ್‌ಗಳನ್ನು ಹಾಕಿರುವದಿರಂದ ಮುನ್ನಚ್ಚರಿಕೆಯನ್ನು ಜೆಸ್ಕಾ ಅಧಿಕಾರಿಗಳು ಪಾಲಿಕೆ ಆಯುಕ್ತರಿಗೆ ಪತ್ರ ಬರೆದು ಎಚ್ಚರಿಸಿದ್ದರು.
11 ಕೆವಿ ವಿದ್ಯುತ್ ತಂತಿ ಮಾರ್ಗದಲ್ಲಿ ಇರುವ ಟೀ ಶೆಡ್ ಗಳಿರುವರಿಂದ ಅಕಸ್ಮಿಕವಾಗಿ ವಿದ್ಯುತ್ ತಂತಿ ಕಡಿದು ಬಿದ್ದರೆ ಭಾರಿ ಅನಾಹುತವಾಗುವ ಸಾಧ್ಯತೆಗಳ ಹಿನ್ನಲೆಯಲ್ಲಿ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸುವಂತೆ ಪಾಲಿಕೆ ಆಯುಕ್ತ ಜುಬಿನ್ ಮಹೋಪಾತ್ರ ಸೂಚನೆ ಮೇರೆಗೆ ಸಿಬ್ಬಂದಿಗಳು ತೆರವಿಗೆ ಹೋದಾಗ ಬಡಾವಣೆ ಮಾಜಿ ಸದಸ್ಯ ನರಸರೆಡ್ಡಿ ಅಂಗಡಿಗಳನ್ನು ತೆರವಿಗೆ ವಿರೋಧಿಸಿದ್ದಾರೆ. ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕಿಳಿದು ಅಂಗಡಿಗಳನ್ನು ತೆರವುಗೊಳಿಸದಂತೆ ಸಿಬ್ಬಂದಿಗಳ ಮೇಲೆ ರಾಜಕೀಯ ಒತ್ತಡ ತಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಅಕ್ರಮವಾಗಿ ಹಾಕಲಾಗಿರುವ ಅಂಗಡಿಗಳಿಂದ ವಿದ್ಯುತ್ ಅವಘಡ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಎದುರಾಗಿದೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪದಿಂದಾಗಿ ಪಾಲಿಕೆ ಅಧಿಕಾರಿಗಳು ಕೆಲಸ ಮಾಡಲು ಆಗದೇ ಇರುವ ಸ್ಥಿತಿ ನಿರ್ಮಾಣವಾಗಿದೆ.