ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ನವಜಾತ ಶಿಶು ಸಪ್ತಾಹ ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞ ಡಾ.ಸಂಜೀವರೆಡ್ಡಿ ಮಾತನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಶಿ, ಶುಶ್ರೂಷಕ ಅಧಿಕಾರಿ ಮರ್ಲಿನಾ, ಪ್ರಮುಖರಾದ ಪ್ರೇಮಾ, ಶಿವಲೀಲಾ ಮೇಟಿ, ಪದ್ಮಾವತಿ ನಾಯಕ ಇದ್ದರು.
- ನವಜಾತ ಶಿಶು
- ಶಿಶು ಆರೈಕೆ
- ಕಾಂಗರೂ ಮದರ್ ಕೇರ್
- ಮಗುವಿನ ಆರೋಗ್ಯ
ನವಜಾತ ಶಿಶು ಆರೈಕೆಗೆ ಗಮನಹರಿಸಿ
ಲಿಂಗಸುಗೂರು: ತಾಯಿಹಾಲು ಹಾಗೂ ಕಾಂಗರೂ ಮದರ್ ಕೇರ್‌ನಿಂದ ಶಿಶು ಮರಣ ಪ್ರಮಾಣ ತಡೆಗಟ್ಟಬಹುದು. ಅಲ್ಲದೆ ನವಜಾತ ಶಿಶು ಆರೈಕೆ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಗೆ ಮುಖ್ಯವಾಗಿದೆ ಎಂದು ಮಕ್ಕಳ ತಜ್ಞ ಡಾ.ಸಂಜೀವರೆಡ್ಡಿ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ನವಜಾತ ಶಿಶು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಂದಿರು, ಗರ್ಭಿಣಿಯರು, ಹುಟ್ಟಿದ ಮಕ್ಕಳ ಸಮಗ್ರ ಆರೈಕೆ ಮುಖ್ಯವಾಗಿದೆ. ಆಹಾರ, ನಿದ್ರೆ, ಸ್ವಚ್ಛತೆ ಮತ್ತು ಲಸಿಕೆಗಳ ಬಗ್ಗೆ ಗಮನಹರಿಸಬೇಕು ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಶಿ ಮಾತನಾಡಿ, ನವಜಾತ ಶಿಶುವಿಗೆ ಸೋಂಕು ಹರಡದಂತೆ ಎಚ್ಚರ ವಹಿಸಬೇಕು. ಕೆಮ್ಮು, ಶೀತದಿಂದ ಬಳಲುತ್ತಿರುವವರು ಮಗುವಿನ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಬೇಕು. ಒಂದು ವರ್ಷದೊಳಗಿನ ಎಲ್ಲ ಲಸಿಕೆಗಳ ಕುರಿತು ಗಮನ ಹರಿಸಬೇಕು ಎಂದು ತಿಳಿಸಿದರು.
ಶುಶ್ರೂಷಕ ಅಧಿಕಾರಿ ಮರ್ಲಿನಾ, ಪ್ರಮುಖರಾದ ಪ್ರೇಮಾ, ಹನುಮಂತರಾಯ, ಶಿವಲೀಲಾ ಮೇಟಿ, ಪದ್ಮಾವತಿ ನಾಯಕ, ರೋಸ್ ಮೇರಿ ಇತರರಿದ್ದರು.