ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಜೆಸ್ಕಾಂನ ವಿದ್ಯುತ್ ಕಂಬದಲ್ಲಿ ಉಂಟಾದ ಕಿಡಿಯಿಂದ ಭತ್ತದ ಬೆಳೆ ಸಂಪೂರ್ಣ ಸುಟ್ಟಿರುವುದು. 
ರಾಯಚೂರು

ಭತ್ತದ ಬೆಳೆಗೆ ಬೆಂಕಿ: ಲಕ್ಷಾಂತರ ರೂ. ಅಗ್ನಿಗಾಹುತಿ

ರಾಯಚೂರು ಜೆಸ್ಕಾಂನ ವಿದ್ಯುತ್ ಕಂಬದಲ್ಲಿ ಉಂಟಾದ ಕಿಡಿಯಿಂದ ಭತ್ತದ ಬೆಳೆ ಸಂಪೂರ್ಣ ಸುಟ್ಟು ಲಕ್ಷಾಂತರ ರೂಪಾಯಿ ಅನಾಹುತವಾಗಿರುವ ಘಟನೆ ತಾಲೂಕಿನ ಕೊರ್ತಕುಂದ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ರಮೇಶ್, ಆಂಜಿನಮ್ಮ, ತಿಮ್ಮಪ್ಪ ಎಂಬುವವರ ಬೆಳೆ ನಷ್ಟವಾಗಿದೆ.
ಜೋರಾಗಿ ಗಾಳಿ ಬೀಸಿದ ಹಿನ್ನೆಲೆ ಸುಮಾರು 20 ಎಕರೆ ವರೆಗೂ ಬೆಂಕಿ ವ್ಯಾಪಿಸಿದ್ದು, ಕೊಯ್ಲಿಗೆ ಬಂದಿದ್ದ ನಾಲ್ಕು ಎಕರೆ ಭತ್ತದ ಗದ್ದೆ ಸಂಪೂರ್ಣ ನಾಶವಾಗಿದ್ದು, ಗದ್ದೆ ಪಕ್ಕದಲ್ಲಿ ರಾಶಿ ಮಾಡಿ ಹಾಕಿದ್ದ ಭತ್ತ, ಪಂಪ್‌ಸೆಟ್ ವೈಯರ್‌ಗಳು ಸೇರಿ ಸಾಕಷ್ಟು ಹಾನಿಯಾಗಿದೆ. ಜೆಸ್ಕಾಂ ಇಲಾಖೆ ನಿರ್ಲಕ್ಷ್ಯದಿಂದ ಹಾನಿಯಾಗಿದೆಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.