ಸಿರವಾರದ ಟೇಲರ್ ಅಂಗಡಿಯಲ್ಲಿ ಬೆಂಕಿ ತಗುಲಿ ಬಟ್ಟೆಗಳು ಸುಟ್ಟಿರುವುದು.
ಸಿರವಾರ: ಪಟ್ಟಣದ ಶಿವಮಾತಾ ಚಿತ್ರಮಂದಿರದ ಕಟ್ಟಡದಲ್ಲಿರುವ ಟೇಲರ್ ಅಂಗಡಿಯಲ್ಲಿ ಗುರುವಾರ ನಸುಕಿನ ಜಾವ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಅಪಾರ ಪ್ರಮಾಣದ ಬಟ್ಟೆಗಳು ಸುಟ್ಟು ಭಸ್ಮವಾಗಿವೆ.
ಅಂಗವಿಕಲ ನರಸಪ್ಪ ಅವರ ನ್ಯಾಚುರಲ್ ಟೇಲರ್ಸ್ ಅಂಗಡಿಯಲ್ಲಿ ಅವಘಡ ಸಂಭವಿಸಿದೆ. ಬೆಳಗ್ಗೆ ಅಂಗಡಿಯಿಂದ ಹೊಗೆ ಬರುವುದನ್ನು ಕಂಡ ಸ್ಥಳೀಯರು ನರಸಪ್ಪಗೆ ಕರೆ ಮಾಡಿ ತಿಳಿಸಿದ್ದಾರೆ.
ಬಂದು ನೋಡಿದಾಗ ಮದುವೆಗಾಗಿ ಹೊಲಿಯಲು ನೀಡಿದ್ದ ಹಲವಾರು ಬಟ್ಟೆಗಳು, ಪೀಠೋಪಕರಣಗಳು, ಹೊಲಿಗೆ ಯಂತ್ರಗಳು, ಇಸ್ತ್ರೀ ಪೆಟ್ಟಿಗೆಗಳು ಹಾಗೂ ಇತರ ವಸ್ತುಗಳು ಆಹುತಿಯಾಗಿವೆ.