ಸಿಂಧನೂರಿನಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಮನೆಮನೆಗೆ ಮಹಾಸಂಪರ್ಕ ಅಭಿಯಾನಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಚಾಲನೆ ನೀಡಿದರು. ಬಿಜೆಪಿ ಮುಖಂಡ ಕೆ.ಕರಿಯಪ ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ ಇತರರಿದ್ದರು. 
ರಾಯಚೂರು

ಫಾರ್ಮ್ ಭರ್ತಿ ಮಾಡಿ ಆ.8ರೊಳಗೆ ಸಲ್ಲಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಎನ್ಯುಮರೇಷನ್ ಫಾರ್ಮ್ ಭರ್ತಿ ಪರಿಶೀಲನೆ
  • ಸಿಂಧನೂರು ಬಿಜೆಪಿ ಮಹಾಸಂಪರ್ಕ ಅಭಿಯಾನ
ಸಿಂಧನೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯ ಪ್ರಗತಿ ಪರಿಶೀಲಿಸಲು ಬಿಜೆಪಿ ನಗರ ಮತ್ತು ಗ್ರಾಮೀಣ ಮಂಡಲದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಮನೆಮನೆಗೆ ಮಹಾಸಂಪರ್ಕ ಅಭಿಯಾನಕ್ಕೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರ ನಿವಾಸ ಮುಂದೆ ಚಾಲನೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿ ಮುಖಂಡ ಕೆ.ಕರಿಯಪ ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಅವರು ಸುಕಾಲಪೇಟೆಯಲ್ಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಸಿದ್ದರಾಮೇಶ ಮನ್ನಾಪುರ ನಟರಾಜ್ ಕಾಲನಿಯಲ್ಲಿ, ಗ್ರಾಮೀಣ ಮಂಡಲದ ಅಧ್ಯಕ್ಷ ಯಂಕೋಬ ನಾಯಕ ರಾಮತ್ನಾಳ ಗ್ರಾಮದಲ್ಲಿ ಆಯಾ ಮುಖಂಡರು, ಕಾರ್ಯಕರ್ತರು ತಮ್ಮ ಬೂತ್‌ಗಳ ವ್ಯಾಪ್ತಿಯಲ್ಲಿರುವ ಮನೆ-ಮನೆಗೆ ತೆರಳಿ ಎಸ್‌ಐಆರ್ ಪ್ರಕ್ರಿಯೆ, ಎನ್ಯುಮರೇಷನ್ ಫಾರ್ಮ್ ಭರ್ತಿ ಕುರಿತು ಪರಿಶೀಲಿಸಿದರು.
ನಂತರ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡ್ ಮತ್ತು ಫೋಟೊ ನೀಡಿ ಎನ್ಯುಮರೇಷನ್ ಫಾರ್ಮ್ ಭರ್ತಿ ಮಾಡಿ ಬಿಎಲ್‌ಒಗಳಿಗೆ ಆ.8ರೊಳಗೆ ಸಲ್ಲಿಸಿ, ಅದರ ಒಂದು ಪ್ರತಿ ಪಡೆದುಕೊಳ್ಳಲು ಮತದಾರರಿಗೆ ತಿಳಿಸಿದರು. ಪ್ರಮುಖರಾದ ಸಿದ್ದಲಿಂಗಯ್ಯಸ್ವಾಮಿ, ಸೋಮನಾಥ ಪತ್ತಾರ, ಶಂಭಣ್ಣ, ಫಕೀರಪ್ಪ ಬಾಗೋಡಿ, ಹಸೇನಪ್ಪ ಸೂಲಂಗಿ, ರವಿ ರಾಠೋಡ್, ರವಿಕುಮಾರ ಉಪ್ಪಾರ, ಮುತ್ತು ಬರಸಿ, ಮುದಿಯಪ್ಪ, ಶಿವು ಹಿರೇಮಠ, ಸೋಮನಾಥ ಕಲ್ಲೂರು ಇದ್ದರು.