ಸಿರವಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಿಮಿತ್ತ ಏರ್ಪಡಿಸಿದ್ದ ಬೈಕ್ ರ‌್ಯಾಲಿಗೆ ತಾಪಂ ಇಒ ಮಂಜುನಾಥ ಜಾವೂರ್ ಚಾಲನೆ ನೀಡಿದರು. ತಾಪಂ ಎಡಿ ಬಸವರಾಜ ಹಟ್ಟಿ, ತಾಲೂಕು ಯೋಜನಾಧಿಕಾರಿ ಚನ್ನವೀರಪ್ಪ, ಪಿಡಿಒಗಳು ಇತರರಿದ್ದರು. 
ರಾಯಚೂರು

ಅರ್ಜಿ ತುಂಬಿ ಬಿಎಲ್‌ಒಗಳಿಗೆ ಸಲ್ಲಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಮಂಜುನಾಥ ಜಾವೂರ್ ಸಲಹೆ
  • ಸಿರವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ
ಸಿರವಾರ: ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂಗವಾಗಿ ಬೈಕ್ ರ‌್ಯಾಲಿ ನಡೆಯಿತು.
ರ‌್ಯಾಲಿಗೆ ಚಾಲನೆ ನೀಡಿದ ತಾಪಂ ಇಒ ಮಂಜುನಾಥ ಜಾವೂರ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯು ಈಗಾಗಲೇ ಆರಂಭವಾಗಿದ್ದು, ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಯೊಬ್ಬ ಮತದಾರರು ಅರ್ಜಿಗಳನ್ನು ಭರ್ತಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಸಬೇಕೆಂದು ತಿಳಿಸಿದರು. ತಾಪಂ ಆವರಣದಿಂದ ಆರಂಭಗೊಂಡ ರ‌್ಯಾಲಿಯು ತಹಸಿಲ್ ಕಚೇರಿ, ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಬಸವೇಶ್ವರ ವೃತ್ತದಿಂದ ಪುನಃ ತಾಪಂ ಆವರಣ ತಲುಪಿತು. ಮತದಾರರ ಪರಿಷ್ಕರಣೆಯ ಪೋಸ್ಟರ್‌ಗಳನ್ನು ಹಿಡಿದು ಅರಿವು ಮೂಡಿಸಲಾಯಿತು.