ಜೋಳ ಖರೀದಿ ಬಾಕಿ ಹಣಪಾವತಿ, ರಸಗೊಬ್ಬರ ಕೊರತೆ ಹಾಗೂ ಕಳಪೆ ಬೀಜ ಮಾರಾಟ ತಡೆಯುವದು ಸೇರಿ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಿ ಎಸಿ ಡಾ.ಹಂಪಣ್ಣ ಸಜ್ಜನ್‌ಗೆ ಮನವಿ ಸಲ್ಲಿಸಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್,ಪ್ರಮುಖರಾದ ಯಂಕಪ್ಪ ಕಾರಬಾರಿ, ದೊಡ್ಡ ಬಸನಗೌಡ, ಸೂಗುರಯ್ಯ ಆರ್‌ಎಸ್ ಮಠ, ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಲಿಪಾಟೀಲ್, ಬೂದಯ್ಯ ಸ್ವಾಮಿ, ಬಸವರಾಜ ಮಾಲಿಪಾಟೀಲ್, ಚಾಮರಾಜ ಜಾನೇಕಲ್ ಇದ್ದರು.
ರಾಯಚೂರು ಜೋಳ ಖರೀದಿ ಬಾಕಿ ಹಣಪಾವತಿ, ರಸಗೊಬ್ಬರ ಕೊರತೆ ಹಾಗೂ ಕಳಪೆ ಬೀಜ ಮಾರಾಟ ತಡೆಯುವದು ಸೇರಿ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮಾಡಿ ಎಸಿ ಡಾ.ಹಂಪಣ್ಣ ಸಜ್ಜನ್‌ಗೆ ಮನವಿ ಸಲ್ಲಿಸಿದರು.
ರೈತರಿಂದ ಖರೀದಿಸಿದ ಜೋಳದಹಣ ಇಂದಿಗೂ ಪಾವತಿಯಾಗಿಲ್ಲ. ಶೇ.85 ರಷ್ಟು ರೈತರಿಗೆಹಣ ಬಾಕಿಯಿದೆ. ಜಿಲ್ಲಾಧಿಕಾರಿಗಳಿಗೆ ಕುರಿತು ದೂರು ನೀಡಿದ್ದು ವಾರದೊಳಗೆ ಇತ್ಯರ್ಥಪಡಿಸುವದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಬಾಕಿ ಹಣ ಪಾವತಿಯಾಗಿಲ್ಲ. ಜಿಲ್ಲೆಯಲ್ಲಿ 12.50 ಲಕ್ಷ ಕ್ವಿಂಟಾಲ್ ಜೋಳ ಖರೀಧಿ ಮಾಡಲಾಗಿದ್ದು, 10 ಲಕ್ಷ ಕ್ವಿಂಟಾಲ್ ಹಣ ಬಾಕಿಯಿದೆ. ಮುಂಗಾರು ಪ್ರಾರಂಭವಾಗಿದ್ದು ಬೀಜ, ರಸಗೊಬ್ಬರ ಖರೀಧಿಸಲು ರೈತರ ಬಳಿ ಹಣವಿಲ್ಲದ ಸ್ಥಿತಿಯಿಂದ ಬಡ್ಡಿ ಸಾಲದ ಮೊರೆ ಹೋಗುವ ಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಿದೆ ಎಂದು ಆರೋಪಿಸಿದರು.
ಹತ್ತಿ ಖರೀಧಿ ಮಾಡಿರುವ ಸರ್ಕಾರ ಒಂದು ವಾರದಲ್ಲಿ ರೈತರಿಗೆ ಹಣ ನೀಡಿದೆ. ಆದರೆ ಜೋಳ ಖರೀದಿ ಮಾಡಿದ ಹಣ ಮಾತ್ರ ಪಾವತಿ ಮಾಡುತ್ತಿಲ್ಲ. ಮುಂಗಾರು ಪ್ರಾರಂಭವಾಗುತ್ತಿದ್ದು ರಸಗೊಬ್ಬರ ಕೊರತೆ ಅಭಾವ ಎದುರಾಗಿದೆ. ನೀರಾವರಿ ಪ್ರದೇಶದಲ್ಲಿ ನೀರು ಹರಿಕೆ ಪ್ರಾರಂಭವಾಗಿಲ್ಲ. ಮತ್ತಷ್ಟು ರಸಗೊಬ್ಬರ ಬೇಡಿಕೆ ಹೆಚ್ಚಳವಾಗಲಿದ್ದು ರೈತರಿಗೆ ತೀವ್ರ ಆತಂಕ ಎದುರಾಗಿದೆ. ಪಕ್ಕದ ಯಾದಗಿರಿ ಜಿಲ್ಲೆಯಲ್ಲಿ ಎಲ್ಲ ರೈತರಿಗೆ ರಸಗೊಬ್ಬರ ದೊರೆಯುವಂತೆ ಅಲ್ಲಿ ಜಿಲ್ಲಾಧಿಕಾರಿಗಳು ಎಕರೆವಾರು ರಸಗೊಬ್ಬರ ನಿಗಧಿ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಎಲ್ಲ ರೈತರಿಗೆ ರಸಗೊಬ್ಬರ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ರಸಗೊಬ್ಬದೊಂದಿಗೆ ಇತರೆ ಗೊಬ್ಬರ ಖರೀಧಿ ಮಾಡುವಂತೆ ಒತ್ತಾಯಿಸುತ್ತಿದ್ದು ತಡೆಯಬೇಕೆಂದರು.
29 ಸಾವಿರ ರೂ ರಸಗೊಬ್ಬರ ಖರೀಧಿ ಮಾಡಿದ ರೈತರಿಗೆ 9257 ರೂ ಇತರೆ ಗೊಬ್ಬರ ಖರೀದಿ ಮಾಡಬೇಕೆಂದು ಷರತ್ತು ವಿಧಿಸಲಾಗುತ್ತಿದೆ. ಕೂಡಲೇ ಅನಗತ್ಯ ಹೊರೆಯನ್ನು ತಡೆಯಲು ಜಿಲ್ಲಾಡಳಿತ ಮುಂದಾಗಬೇಕೆಂದರು. ಕೃಷಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘವೇ ದೂರು ನೀಡಲಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್,ಪ್ರಮುಖರಾದ ಯಂಕಪ್ಪ ಕಾರಬಾರಿ, ದೊಡ್ಡ ಬಸನಗೌಡ, ಸೂಗುರಯ್ಯ ಆರ್‌ಎಸ್ ಮಠ, ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಲಿಪಾಟೀಲ್, ಬೂದಯ್ಯ ಸ್ವಾಮಿ, ಬಸವರಾಜ ಮಾಲಿಪಾಟೀಲ್, ಚಾಮರಾಜ ಜಾನೇಕಲ್. ಸಿದ್ದಯ್ಯಸ್ವಾಮಿ, ಲಿಂಗನಗೌಡ, ಬಾಲಾಜಿ ಸೇರಿ ಅನೇಕರಿದ್ದರು.