ಲಿಂಗಸುಗೂರಿನಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿಗೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮನವಿ ಸಲ್ಲಿಸಲಾಯಿತು. ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ರಾಜ್ಯ ಪರಿಷತ್ ಸದಸ್ಯ ರಾಮಕೃಷ್ಣ ನಾಯಕ, ಕಾರ್ಯದರ್ಶಿ ನಾಗೇಶ ಬಿರಾದಾರ ಇತರರಿದ್ದರು.
- ಸರ್ಕಾರಿ ನೌಕರರ ಸಂಘ ಮನವಿ
- ಲಿಂಗಸುಗೂರು ಜನಗಣತಿ ಎಸಿಗೆ ಮನವಿ
ಲಿಂಗಸುಗೂರು: ವಿಶೇಷ ಪ್ರಕರಣದಡಿ ಕೆಲ ನೌಕರರು, ಶಿಕ್ಷಕರಿಗೆ ಜನಗಣತಿ, ಮನೆ ಪಟ್ಟಿ ಕಾರ್ಯದಿಂದ ವಿನಾಯಿತಿ ನೀಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಎಸಿ ಬಸವಣೆಪ್ಪ ಕಲಶೆಟ್ಟಿಗೆ ಮನವಿ ಸಲ್ಲಿಸಿತು.
ಕಳೆದ 2024-25ನೇ ಸಾಲಿನಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರು ಬೇರೆ ಜಿಲ್ಲೆ, ತಾಲೂಕಿಗೆ ವರ್ಗಾವಣೆಯಾಗಿದ್ದು, ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಮೂಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಏ.9ರಿಂದ ಬಿಡುಗಡೆ ಹೊಂದುತ್ತಿರುವ ಶಿಕ್ಷಕರು, ಅಂಗವಿಕಲರು, ಗರ್ಭಿಣಿಯರು, ಬಿಎಲ್‌ಒ, ನಿವೃತ್ತ ಅಂಚಿನಲ್ಲಿರುವ ನೌಕರರಿಗೆ ಮನೆಪಟ್ಟಿ ಕಾರ್ಯದಿಂದ ವಿನಾಯಿತಿ ನೀಡಲು ತಹಸೀಲ್ದಾರ್ ಹಾಗೂ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹಾಜಿಬಾಬು ಕಲ್ಯಾಣಿ, ರಾಜ್ಯ ಪರಿಷತ್ ಸದಸ್ಯ ರಾಮಕೃಷ್ಣ ನಾಯಕ, ಕಾರ್ಯದರ್ಶಿ ನಾಗೇಶ ಬಿರಾದಾರ, ಖಜಾಂಚಿ ತಾವರೆಪ್ಪ ನಾಯಕ, ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ಶಿಕ್ಷಕ ಅಮರಪ್ಪ ಸಾಲಿ, ಪ್ರಮುಖರಾದ ಗಂಗಾಧರ ನಾಯಕ, ಜಮದಗ್ನಿ, ವೀರೇಶ ತೇರದಾಳ, ಕಾಂತೇಶ ವಗ್ಗರ, ಗೀತಾ, ಸಾವಿತ್ರಮ್ಮ, ಬಸವರಾಜ ಠಾಗೇದ, ಹುಸೇನಸಾಬ್, ಶಿವಶಂಕರಗೌಡ, ವಿಶ್ವಾರಾಧ್ಯ, ಸುಭಾಸ ಇದ್ದರು.