ಅರಕೇರಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ನಾಗರಾಜ ದೇವರಮನಿ, ನಾಗಯ್ಯಸ್ವಾಮಿ, ಸಲೀಂ ಸಾಬ್ ಇತರರಿದ್ದರು.
- ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ ಅಭಿಮತ
- ಅರಕೇರಾ ಮೊಬೈಲ್ ಬಳಕೆ ನಿಷೇಧ ಜಾಗೃತಿ
ಅರಕೇರಾ: ಅತಿಯಾದ ಮೊಬೈಲ್ ಬಳಕೆಯಿಂದ ಅಡ್ಡಪರಿಣಾಮಗಳೇ ಹೆಚ್ಚು. ಸಾಧ್ಯವಾದಷ್ಟು ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಎಸ್ಡಿಎಂಸಿ ಅಧ್ಯಕ್ಷ ಮಾನಶಯ್ಯ ಪೂಜಾರಿ ಹೇಳಿದರು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೊಬೈಲ್ ಬಳಕೆ ನಿಷೇಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಅನ್ನು ಹೆಚ್ಚಾಗಿ ಅವಲಂಬಿಸಿದ್ದೇವೆ. ಓದುವಾಗ ಮಕ್ಕಳ ಕೈಲಿ, ಬೋಧಿಸುವ ಶಿಕ್ಷಕರ ಕೈಲಿ ಮೊಬೈಲ್ ಇದ್ದರೆ, ಇಬ್ಬರಿಗೂ ಹಿನ್ನಡೆಯಾಗಲಿದೆ. ಅವಶ್ಯಕತೆಗಿಂತ ಹೆಚ್ಚು ಬಳಸಿದರೆ ನೇರವಾಗಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉಪಯೋಗಕ್ಕೆ ಬಾರದ ರೀಲ್ಸ್, ಸಾಮಾಜಿಕ ಜಾಲತಾಣ ಬಳಕೆಯಿಂದ ಮಾನಸಿಕ ಖಿನ್ನತೆ, ದೃಷ್ಟಿದೋಷ, ಏಕಾಗ್ರತೆ ಕೊರತೆ, ಗ್ರಹಿಕೆ ಸಾಮರ್ಥ್ಯ ಕಳೆದುಕೊಳ್ಳುವ ಸಾಧ್ಯತೆ ಇದೆ. ಇದರಿಂದ ಯಾರೂ ಮೊಬೈಲ್ ಹೆಚ್ಚು ಹೊತ್ತು ಬಳಸಬಾರದು ಎಂದು ತಿಳಿಸಿದರು.
ಶಿಕ್ಷಕ ಕೆ.ಎನ್.ಹುಣಸಿಕಟ್ಟಿ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್ಡಿಎಂಸಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ನಾಗರಾಜ ದೇವರಮನಿ, ಸದಸ್ಯರಾದ ನಾಗಯ್ಯಸ್ವಾಮಿ, ಸಲೀಂ ಸಾಬ್, ಬಸ್ಸಮ್ಮ, ಮಹಿಬೂಬ್, ಶಾಲಂ ಬಡಿಗೇರಾ, ಯಲ್ಲಮ್ಮ, ಸಹ ಶಿಕ್ಷಕರಾದ ಲಕ್ಷ್ಮಣ, ಬಸವರಾಜ, ಬಸ್ಸಮ್ಮ, ಹಬೀಬಾ, ಜ್ಯೋತಿ, ಸಾಬಯ್ಯ ಕರ್ನಾಳ, ವೆಂಕಟೇಶ ಇತರರಿದ್ದರು.