ಸಿರವಾರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಕ್ಷಯ ರೋಗ ದಿನ ಹಮ್ಮಿಕೊಳ್ಳಲಾಗಿತ್ತು. ಡಾ.ಸುನೀಲ್ ಸರೋದೆ, ಮಹತ್ವಾಕಾಂಕ್ಷಿ ತಾಲೂಕು ಸಂಯೋಜಕ ಡಾ.ಜ್ಞಾನ ಸುಂದರಿ, ಕ್ರೈ ಸಂಸ್ಥೆಯ ತಾಲೂಕು ಸಂಯೋಜಕ ದೇವರಾಜ, ಡಾ.ಸುರೇಶ್, ವಲಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ವಿದ್ಯಾರಾಣಿ, ಕ್ಷಯ ರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಇತರರಿದ್ದರು. 
ರಾಯಚೂರು

ಇಲಾಖೆಗಳ ಸಹಕಾರದಿಂದ ನಿರ್ಮೂಲನೆ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಇಲಾಖೆಗಳ ಸಹಕಾರ

ಇಲಾಖೆಗಳ ಸಹಕಾರದಿಂದ ನಿರ್ಮೂಲನೆ ಸಾಧ್ಯ

ಸಿರವಾರ: ಆರೋಗ್ಯ ಇಲಾಖೆ ಜತೆ ವಿವಿಧ ಇಲಾಖೆಗಳ ಸಹಕಾರ ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಕ್ಷಯ ರೋಗವನ್ನು ಬೇಗನೆ ನಿರ್ಮೂಲನೆ ಮಾಡಲು ಸಾಧ್ಯ ಎಂದು ಡಾ.ಸುನೀಲ್ ಸರೋದೆ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಗನವಾಡಿ ಕಾರ್ಯಕರ್ತೆರು ಮತ್ತು ಆಶಾ ಕಾರ್ಯಕರ್ತೆರು ನಿಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಶಯಾಸ್ಪದ ರೋಗಿಗಳು ಕಂಡಂಲ್ಲಿ ತಪಾಸಣೆ ಮಾಡಿಸಬೇಕು ಎಂದರು.
ಕ್ಷಯರೋಗ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಮಾತನಾಡಿ, ಕ್ಷಯರೋಗಕ್ಕೆ 5000 ಸಾವಿರ ವರ್ಷದ ಇತಿಹಾಸ ಇದೆ. ಇದು ಸಾಂಕ್ರಾಮಿಕ ರೋಗವಾಗಿದೆ. ಶ್ವಾಸಕೋಶದ ಕ್ಷಯ, ಶ್ವಾಸಕೋಶೇತರ ಕ್ಷಯ ರೋಗದ 2 ವಿಧಾನಗಳು.
ಕ್ಷಯರೋಗಿ ಚಿಕಿತ್ಸೆ ಪಡೆಯದಿದ್ದರೆ ಆತ ಒಂದು ವರ್ಷದಲ್ಲಿ 10-15 ಜನಕ್ಕೆ ಕ್ಷಯ ರೋಗ ಹರಡಿಸಬಲ್ಲ. ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಷಯರೋಗ ಮುಕ್ತ ಭಾರತಕ್ಕಾಗಿ ಪಣ ತೊಟ್ಟಿದ್ದು, ಪ್ರತಿಯೊಬ್ಬರು ಸಹಕರಿಸಬೇಕು ಎಂದು ತಿಳಿಸಿದರು. ನಂತರ ಜಾಗೃತಿ ಜಾಥಾ ನಡೆಯಿತು.
ಮಹತ್ವಾಕಾಂಕ್ಷಿ ತಾಲೂಕು ಸಂಯೋಜಕ ಡಾ.ಜ್ಞಾನ ಸುಂದರಿ, ಕ್ರೈ ಸಂಸ್ಥೆಯ ತಾಲೂಕು ಸಂಯೋಜಕ ದೇವರಾಜ, ಡಾ.ಸುರೇಶ್, ವಲಯ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಪ್ರಮುಖರಾದ ವಿದ್ಯಾರಾಣಿ, ಸಿದ್ದಮ್ಮ ರಂಜನ್, ನಿರ್ಮಲಾ ತರರಿದ್ದರು.