ಮಾಡಗಿರಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆನಂದಪ್ಪ ಮಾಡಗಿರಿ, ಬಯಲಾಟ ಕಲಾವಿದ ಮುದುಕಪ್ಪ ನಾಯಕ ಹಾಗೂ ಇತರರನ್ನು ಸನ್ಮಾನಿಸಲಾಯಿತು. ಹೊಸಮನಿ ಪ್ರಕಾಶನ ಸಂಸ್ಥೆಯ ಅಧ್ಯಕ್ಷ ಬಷೀರ್ ಅಹ್ಮದ್ ಹೊಸಮನಿ, ತಾರಮ್ಮ ಜಯವಂತ, ಎಂ.ಪಿ.ಬಸವರಾಜಪ್ಪ ಗೌಡ, ಜಯವಂತ ಇತರರಿದ್ದರು.
ಸಿರವಾರ: ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬಂತೆ ಕನ್ನಡಿಗರಿಗೆ ಹೊಸಮನಿ ಪ್ರಕಾಶ ಸಂಸ್ಥೆಯ ಕೊಡುಗೆ ಅಪಾರವಾದದ್ದು ಎಂದು ಮುಖ್ಯಶಿಕ್ಷಕ ವಿರೂಪಾಕ್ಷಿ ಹೇಳಿದರು.
ತಾಲೂಕಿನ ಮಾಡಗಿರಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹೊಸಮನಿ ಬಯಲಾಟ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಹೊಸಮನಿ ಪ್ರಕಾಶನ ಸಂಸ್ಥೆಯ ಬಷೀರ್ ಅಹ್ಮದ್‌ಅವರು ಹಲವಾರು ವರ್ಷಗಳಿಂದ ಕನ್ನಡ ಸೇವೆಗೆ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಕನ್ನಡ ನಾಡು, ನುಡಿ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ ಎಂದರು. ಬಷೀರ್ ಅಹ್ಮದ್ ಹೊಸಮನಿ, ಇಮಾಮುದ್ದೀನ್ ಮಾತನಾಡಿದರು. ಸಮಾಜ ಸೇವಕ ಆನಂದಪ್ಪ ಮಾಡಗಿರಿ, ಬಯಲಾಟ ಕಲಾವಿದ ಮುದುಕಪ್ಪ ನಾಯಕಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷೆ ತಾರಮ್ಮ ಜಯವಂತ, ಪ್ರಮುಖರಾದ ಎಂ.ಪಿ.ಬಸವರಾಜಪ್ಪ ಗೌಡ, ಜಯವಂತ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ್ ನಾಯಕ, ಹೊಸಮನಿ ಪ್ರಕಾಶನ ಸಂಸ್ಥೆಯ ಉಪಾಧ್ಯಕ್ಷೆ ಪರ್ವೀನ್ ಬೇಗಂ, ನಿವೃತ್ತ ಶಿಕ್ಷಕ ಮುದುಕಪ್ಪ, ಎಸ್ಡಿಎಂಸಿ ಅಧ್ಯಕ್ಷ ಮೈನುದ್ದೀನ್ ಇತರರಿದ್ದರು.