ತುಂಬಲಗಡ್ಡಿಯಲ್ಲಿ ನಾಗರಹಾಳ ವಲಯ ಮಟ್ಟದ ಕ್ರೀಡಾಕೂಟಕ್ಕೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಶನಿವಾರ ಚಾಲನೆ ನೀಡಿದರು. ಮುಖ್ಯಶಿಕ್ಷಕ ಶಿವಬಸಪ್ಪ ಅಂಗಡಿ, ಪ್ರಮುಖರಾದ ಶ್ರೀಶೈಲಗೌಡರ್, ಕೆ. ಯಮನಪ್ಪ, ಲಕ್ಕಪ್ಪ, ಹನುಮಪ್ಪ ಯಮನಪ್ಪ, ತಿಪ್ಪಣ್ಣ, ಶಿವನಗೌಡ, ಲೋಕಪ್ಪ ದೇಸಾಯಿ ಇತರರಿದ್ದರು. 
ರಾಯಚೂರು

ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಿ

ಮುದಗಲ್: ಕ್ರೀಡಾ ನಿಯಮಗಳ ಬದ್ಧತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರತಿಯೊಬ್ಬ ಪಟು ಮೈಗೂಡಿಸಿಕೊಳ್ಳಬೇಕು ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಚಂದ್ರಶೇಖರ ಹೇಳಿದರು.
ತಂಬಲಗಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ನಾಗರಹಾಳ ಕ್ಲಸ್ಟರ್ ಮಟ್ಟದ ಕ್ರೀಡಾ ಕೂಟಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. 
ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಭಾವಹಿಸುವುದು ಮುಖ್ಯವಾಗಿದೆ. ಕ್ರೀಡಾ ನಿಯಮಕ್ಕೆ ಎಲ್ಲರೂ ಬದ್ಧರಾಗಬೇಕು, ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಡುವಂತಾಗಬೇಕು. ಮುಕ್ತ ಮನಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಿ ಜಯಗಳಿಸಿ ಶಾಲೆ ಹಾಗೂ ಊರಿಗೆ ಕೀರ್ತಿ ತರಬೇಕು ಎಂದರು. 
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ ಮಾತನಾಡಿ, ಕ್ರೀಡೆಯಿಂದ ಸದೃಢ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಆಟದೊಂದಿಗೆ ಪಾಠದತ್ತವೂ ಗಮನಹರಿಸಿ ಸುಶಿಕ್ಷಿತರಾಗಬೇಕು ಎಂದರು. ಕೂಟದಲ್ಲಿ 11 ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 
ಎಸ್ಡಿಎಂಸಿ ಅಧ್ಯಕ್ಷೆ ವನಮಾಲಾ ಯಮನೂರು ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷ ಅಬ್ದುಲ್ ಖಾದರ ದೋಟಿಹಾಳ, ಪ್ರಮುಖರಾದ ಹೇಮಯ್ಯ ತಂತಗುಂಟಿ, ಬಸವರಾಜ ಮಾನಪ್ಪ ಬಡಿಗೇರ, ಸಂಗಪ್ಪ ಟಕ್ಕಳಗಿ, ಸುಭಾಸ ರೆಡ್ಡೇರ್, ರಾಮುಲು ಗುತ್ತೇದಾರ, ಹನುಮಪ್ಪ, ದೇವಪ್ಪ ಜೂಲಗುಡ್ಡ, ಸಿಆರ್‌ಪಿ ಕಾಸೀಂಸಾಬ್, ಶಾಲೆ ಮುಖ್ಯಶಿಕ್ಷಕ ಶಿವಬಸಪ್ಪ ಅಂಗಡಿ, ಜಿತೇಂದ್ರ ಕುಮಾರ ಗುತ್ತೇದಾರ, ಅನಂತರಾವ್ ಕುಲಕರ್ಣಿ, ಸಾಬನಗೌಡ,  ಸಂಗನಬಸಪ್ಪ, ಆನಂದಪ್ಪ, ಹನುಮಪ್ಪ, ಸಾಬಣ್ಣ ಇತರರಿದ್ದರು.