ಕವಿತಾಳದಲ್ಲಿ ಏರ್ಪಡಿಸಿದ್ದ ಕನಕ ಜಯಂತಿ ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯ ನಾಯಕ, ನಾಗಯ್ಯತಾತ ಗುರುವಿನ್, ಸದಾಶಿವ ತಾತ, ಕರಿಯಪ್ಪ ತಾತ, ಲಿಂಗಣ್ಣ ತಾತ, ಹಣಗಿ ಶಿವಪ್ಪ ತಾತ, ಶಿವಶಂಕ್ರಪ್ಪ ತಾತ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜ್ಯ ಕುರುಬ ಸಂಘದ ಅಧ್ಯಕ್ಷ ಎಂ.ಈರಣ್ಣ, ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಜಿಪಂ ಮಾಜಿ ಸದಸ್ಯ ಮಾಳಪ್ಪ ತೋಳ ಇತರರಿದ್ದರು. 
ರಾಯಚೂರು

ಕನಕದಾಸರ ತತ್ವಾದರ್ಶ ಮೈಗೂಡಿಸಿಕೊಳ್ಳಿ

ಕವಿತಾಳ: ಭಕ್ತ ಕನಕದಾಸರು ಶೇಷ್ಠ ಸಂತರಾಗಿದ್ದು, ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರು ಒಂದೇ ಸಮುದಾಯಕ್ಕೆ ಸೀಮಿತರಲ್ಲ. ರಾಜರ ಆಡಳಿತ ಕಾಲದಲ್ಲಿಯೂ ಕೂಡ ಸಮಾನತೆ ಸಾರಿದವರು. ಕನಕನ ಭಕ್ತಿಗೆ ಮೆಚ್ಚಿ ಉಡುಪಿಯಲ್ಲಿ ಶ್ರೀಕೃಷ್ಣ ದರ್ಶನ ನೀಡಿದ್ದು ಇತಿಹಾಸದಿಂದ ತಿಳಿಯಬಹುದಾಗಿದೆ ಎಂದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿದರು. ಬೀರಲಿಂಗೇಶ್ವರ ಶರಣರು ಸಾನ್ನಿಧ್ಯವಹಿಸಿದ್ದರು. ಜಾಲಹಳ್ಳಿಯ ನಾಗಯ್ಯತಾತ ಗುರುವಿನ್, ಮುಂಡರಗಿಯ ಸದಾಶಿವ ತಾತ, ಕವಿತಾಳದ ಕರಿಯಪ್ಪ ತಾತ, ಬಳಗಾನೂರಿನ ಲಿಂಗಣ್ಣ ತಾತ, ಹಣಗಿ ಶಿವಪ್ಪ ತಾತ, ಶಿವಶಂಕ್ರಪ್ಪ ತಾತ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ರಾಜ್ಯ ಕುರುಬ ಸಂಘದ ಅಧ್ಯಕ್ಷ ಎಂ.ಈರಣ್ಣ, ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ, ಜಿಪಂ ಮಾಜಿ ಸದಸ್ಯ ಮಾಳಪ್ಪ ತೋಳ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಕಿರಿಲಿಂಗಪ್ಪ, ಕರಿಯಪ್ಪ ಹಾಲಾಪುರ,
ನಿರುಪಾದಿ ವಕೀಲ, ಶಿವಣ್ಣ ವಕೀಲ, ಗಂಗಪ್ಪ ದಿನ್ನಿ, ಯಮುನಪ್ಪ ದಿನ್ನಿ, ಲಿಂಗಪ್ಪ ತೋಳದ ಇತರರಿದ್ದರು.
ಸಿಎಂ ಬಣ್ಣಿಸಿದ ಶಿವನಗೌಡ ನಾಯಕ: ಕಾರ್ಯಕ್ರಮದಲ್ಲಿ ಬಿಜೆಪಿಯ ಮಾಜಿ ಸಚಿವ ಶಿವನಗೌಡ ನಾಯಕ ಅವರು ಮಾತನಾಡಿ, ಹಾಲುಮತ ಸಮಾಜದವರು ಹಾಲಿನಂತಹ ಮನಸ್ಸು ಉಳ್ಳವರು. ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕನಕ ಜಯಂತಿ ಸೇರಿದಂತೆ ಮಹಾತ್ಮರ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಅವರ ಸಾಮಾಜಿಕ ಕಾಳಜಿ ಪ್ರೇರಣೆಯಾಗಿದೆ. ಹೀಗೆ ಸಿದ್ದರಾಮಯ್ಯ ಅವರನ್ನು ಬಣ್ಣಿಸಿದಾಗ ನೆರೆದ ಜನರು ಜೈಕಾರ ಹಾಕಿದರು. ಇನ್ನೂ ಕೆಲವರು ಮುಂದಿನ ದಿನದಲ್ಲಿ ಶಿವನಗೌಡ ನಾಯಕ ಮಾನ್ವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಎನ್ನುವ ಗುಸು ಗುಸು ಮಾತುಗಳು ಕೇಳಿಬಂದವು.