ಮುದಗಲ್ ಸಮೀಪದ ಗುಡಿಹಾಳ ಗ್ರಾಮದಲ್ಲಿ ರಾಮಲಿಂಗೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಶರಣರ ಆಧ್ಯಾತ್ಮ ಪ್ರವಚನದ ಕಾರ್ಯಕ್ರಮವನ್ನು ತಾಳಿಕೋಟೆಯ ಖಾಸ್ಗತ್ತೇಶ್ವರ ಮಠದ ಶ್ರೀ ಸಿದ್ದಲಿಂಗ ದೇವರು ಉದ್ಘಾಟಿಸಿದರು. ಕುಕನೂರಿನ ಚನ್ನಮಲ್ಲ ಸ್ವಾಮೀಜಿ, ಹುನಕುಂಟಿಯ ಶರಣಯ್ಯ ತಾತನವರು ಇತರರಿದ್ದರು. 
ರಾಯಚೂರು

ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಶರಣರ ಆಧ್ಯಾತ್ಮ ಪ್ರವಚನ

ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ

ಮುದಗಲ್: ಆಧುನಿಕತೆ ಭರಾಟೆಯಲ್ಲಿ ಯುವಕರು ಸಂಸ್ಕಾರ ಮರೆಮಾಚುವುದನ್ನು ಬಿಟ್ಟು ಸಾತ್ವಿಕ ಜೀವನ ರೂಪಿಸಿಕೊಳ್ಳಲು ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಾಳಿಕೋಟೆಯ ಖಾಸ್ಗತ್ತೇಶ್ವರ ಮಠದ ಸಿದ್ದಲಿಂಗದೇವರು ಹೇಳಿದರು.
ಸಮೀಪದ ಗುಡಿಹಾಳ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜಾತ್ರಾ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶರಣರ ಆಧ್ಯಾತ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಲ್ಲರನ್ನು ಸಮಾನತೆಯಿಂದ ಕಾಣುವ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಜೀವನ ನಡೆಸಬೇಕು. ಯುವಕರು ದುಶ್ಚಟಗಳಿಂದ ದೂರ ಇರಬೇಕು ಎಂದರು.
ಕುಕನೂರಿನ ಚನ್ನಮಲ್ಲ ಸ್ವಾಮೀಜಿ, ಗ್ರಾಮದ ರೈತ ಮಿತ್ರ ಶಿವಕುಮಾರ್ ಪೊಲೀಸ್ ಪಾಟೀಲ್, ಪ್ರಮುಖರಾದ ರುದ್ರಣ್ಣ ಅಂಕಸದೊಡ್ಡಿ, ಈರಣ್ಣ ಅಂಕಸದೊಡ್ಡಿ, ನಾಗರಾಜ ಗುಡಿಹಾಳ, ಚನ್ನಬಸವ ಚುಕನಟ್ಟಿ ಇತರರಿದ್ದರು.