ಕವಿತಾಳದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಅವರನ್ನು ಸನ್ಮಾನಿಸಲಾಯಿತು. ಭಗೀರಥ ಯುವಕ ಸಂಘದ ಉಪಾಧ್ಯಕ್ಷ ಮೌನೇಶ ಕಟ್ಟಿಮನಿ, ಪಪಂ ಸದಸ್ಯ ಅಮರೇಶ ಕಟ್ಟಿಮನಿ, ಪ್ರಮುಖರಾದ ಹನುಮಂತ ಕುರಿ, ನಾಗಪ್ಪ ಕರೇಗೋಡಿ, ಅಮರೇಶ ಬಳಗಾನೂರು ಇತರರಿದ್ದರು.  
ರಾಯಚೂರು

ಶೈಕ್ಷಣಿಕ-ರಾಜಕೀಯ ಸೌಲಭ್ಯ ಕಲ್ಪಿಸಲು ಯತ್ನ

ಪ್ರಮುಖ ಮುಖ್ಯಾಂಶಗಳು

  • ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಹೇಳಿಕೆ
  • ಕವಿತಾಳ ಅಧ್ಯಕ್ಷ ಪ್ರಮುಖರಿಂದ ಸನ್ಮಾನ
ಕವಿತಾಳ: ಉಪ್ಪಾರ ಸಮುದಾಯ ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು, ಅಭಿವೃದ್ಧಿಗೆ ಶ್ರಮಿಸುವೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ ಹೇಳಿದರು.
ಪಟ್ಟಣದ ಭಗೀರಥ ನಗರದಲ್ಲಿ ಭಗೀರಥ ಯುವಕ ಸಂಘ ಮತ್ತು ಪ್ರಮುಖರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನಮ್ಮ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರವನ್ನು ಒತ್ತಾಯ ಮಾಡಿ ಮೂಲಸೌಕರ್ಯ, ಶಿಕ್ಷಣ, ರಾಜಕೀಯದಲ್ಲಿ ಸವಲತ್ತು ಕಲ್ಪಿಸಲು ಪ್ರಯತ್ನಿಸುತ್ತಿದ್ದೇನೆ ಎಂದರು.

ಭಗೀರಥ ಭವನ ನಿರ್ಮಾಣಕ್ಕಾಗಿ 25 ಲಕ್ಷ ರೂ. ಮಂಜೂರು ಮಾಡಬೇಕು, ಶಿಕ್ಷಣ ಮತ್ತು ರಾಜಕೀಯದಲ್ಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ಜಾರಿಗೊಳಿಸಲು ಪ್ರಯತ್ನಿಸಬೇಕು ಎಂದು ಯುವಕ ಸಂಘದಿಂದ ಕೋರಲಾಯಿತು. ಸಂಘದ ಉಪಾಧ್ಯಕ್ಷ ಮೌನೇಶ ಕಟ್ಟಿಮನಿ, ಪಪಂ ಸದಸ್ಯ ಅಮರೇಶ ಕಟ್ಟಿಮನಿ, ಪ್ರಮುಖರಾದ ಹನುಮಂತ ಕುರಿ, ನಾಗಪ್ಪ ಕರೇಗೋಡಿ, ಅಮರೇಶ ಬಳಗಾನೂರು, ಮೌನೇಶ ಗುಡಿ, ಮಂಜುನಾಥ, ಕುಪ್ಪಣ್ಣ, ವಿನೋದ್ ಕುಮಾರ ಇತರರಿದ್ದರು.