ಹುಸೇನಪುರ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕವಿಲ್ಲದೆ ಕೊಳವೆಬಾವಿಯಲ್ಲಿ ನೀರು ಬಾರದಿರುವುದರಿಂದ ಸಾರ್ವಜನಿಕರು ಪರದಾಡುತ್ತಿರುವುದು. 
ರಾಯಚೂರು

ವಿದ್ಯುತ್ ಪರಿವರ್ತಕವಿಲ್ಲದೆ ಕುಡಿವ ನೀರಿಗೆ ತೊಂದರೆ

ಅಶೋಕ್ ಕುಮಾರ್ ಎನ್

ಕವಿತಾಳ: ಹುಸೇನಪುರ ಗ್ರಾಮದ ಹೊಸ ಓಣಿಯಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ.

ವಿದ್ಯುತ್ ಪರಿವರ್ತಕದಲ್ಲಿನ ತಾಂತ್ರಿಕ ಸಮಸ್ಯೆಯಿಂದ 15 ದಿನದಿಂದ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿಲ್ಲ.

ವಿದ್ಯುತ್ ಪರಿವರ್ತಕದಲ್ಲಿನ ತಾಂತ್ರಿಕ ಸಮಸ್ಯೆ ಬಗ್ಗೆ ನಾವು ಅಧಿಕಾರಿಗಳಿಗೆ ಬಹಳಷ್ಟು ಸಲ ಹೇಳಿದರೂ ಸ್ಪಂದಿಸಿಲ್ಲ. ಹಿರೇಬಾದರದಿನ್ನಿಯಲ್ಲಿ ಪರಿವರ್ತಕವಿದ್ದು, ಅದನ್ನು ನಿಮ್ಮ ಗ್ರಾಮಕ್ಕೆ ತೆಗೆದುಕೊಂಡು ಬನ್ನಿ ಎಂದು ಹೇಳಿದರು. ಪ್ರತಿಮನೆಯಿಂದ 100 ರೂ. ಸಂಗ್ರಹಿಸಿ ಪರಿವರ್ತಕ ತಂದಿದ್ದು, ಅದನ್ನು ಅಳವಡಿಸುವ ಮೂಲಕ ನೀರಿನ ಸಮಸ್ಯೆ ನಿವಾರಿಸಬೇಕು. ನೀರಿಗಾಗಿ ನಾವು ಬೇರೆ ಕೆಲಸ ಮಾಡದಂತಾಗಿದೆ ಎಂದು ನಿವಾಸಿಗಳಾದ ಸಾಂತಮ್ಮ, ರೇಣುಕಮ್ಮ, ಪಾರ್ವತಮ್ಮ, ಈರಮ್ಮ, ಯಲ್ಲಪ್ಪ, ಗುಂಡಪ್ಪ, ಹುಚ್ಚಪ್ಪ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಜೆಸ್ಕಾಂ ಇಂಜಿನಿಯರ್ ಜಲಾಲಿ, ಇಲಾಖೆಯಲ್ಲಿ ವಾಹನ ಸೌಲಭ್ಯವಿಲ್ಲದ್ದರಿಂದ ಪರಿವರ್ತಕ ತರಲು ಗ್ರಾಮಸ್ಥರಿಗೆ ಹೇಳಲಾಗಿತ್ತು. ಗ್ರಾಮಸ್ಥರು ಪರಿವರ್ತಕ ತಂದಿದ್ದು, ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.