ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ 119 ನೇ ಜಯಂತ್ಯೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ಚಿಂತಕ ದಾಸನೂರು ಕೂಸಣ ಮಾಲಾರ್ಪಣೆ ಮಾಡಿದರು. ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ, ಕುಲಸಚಿವ ಡಾ.ಎ.ಚನ್ನಪ್ಪ ,ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಪಾರ್ವತಿ.ಸಿ.ಎಸ್., ಡಾ.ಲತಾ.ಎಂ.ಎಸ್ ಇದ್ದರು. 
ರಾಯಚೂರು

ಡಾ.ಬಾಬು ಜಗಜೀವನ ರಾಮ 119 ನೇ ಜಯಂತಿ ಆಚರಣೆ

ರಾಯಚೂರು ಡಾ.ಬಾಬು ಜಗಜೀವನರಾಮ ಅವರ ಕೊಡುಗೆ ಆದರ್ಶಗಳು ವಿಭಿನ್ನವಾಗಿದ್ದು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಪಾಲಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆಂದು ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಸಂಸ್ಥೆ ಚಿಂತಕ ದಾಸನೂರು ಕೂಸಣ್ಣ ಹೇಳಿದರು.
ಆದಿಕವಿ ಶ್ರೀಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ ಅವರ 119 ನೇ ಜಯಂತ್ಯೋತ್ಸವನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು, ಡಾ.ಬಾಬು ಜಗಜೀವನರಾಮ ಅವರ ನಾಯಕತ್ವ ಬೆಳೆಯಲು ಮಾಡಿದ ಸಾಧನೆ ಬಹು ಮುಖ್ಯ ಪಾತ್ರವಹಿಸುತ್ತದೆ. ಕಾರ್ಮೀಕ ಕಾನೂನುಗಳು, ವಿಶಾಲವಾದ ಮನಸ್ಸುಗಳನ್ನು ಪ್ರತಿಯೊಬ್ಬರು ಹೊಂದಿರಬೇಕು. ವಿದ್ಯಾರ್ಥಿಗಳು ಪುಸ್ತಕಗಳು, ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಯುವಕರು ಮೋಬೈಲ್ ಮೊರೆ ಹೊಗಿದ್ದಾರೆ, ಅಗತ್ಯ ಇರುವ ಮಾಹಿತಿ ಮಾತ್ರ ಬಳಕೆ ಮಾಡಿ ಎಂದು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳು ಕೀಳರಿಮೆಯಿಂದ ಬದುಕದೆ ಮೇಲ್ಮುಖವಾಗಿ ಬೆಳೆದು ದೊಡ್ಡ ವ್ಯಕ್ತಿಗಳಾಗಬೇಕೆಂದು ತಿಳಿಸಿದರು.
ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಮಾತನಾಡಿ, ಡಾ.ಬಾಬು ಜಗಜೀವನರಾಮ ಅವರ ಹೋರಾಟ ಚಿಂತನೆಗಳನ್ನು ಮುಖ್ಯವಾಗಿ ನಾವು ಗಮನಿಸಬೇಕು. ವಿದ್ಯಾರ್ಥಿಗಳು ಡಾ.ಬಾಬು ಜಗಜೀವನರಾಮ ಅವರ ಆದರ್ಶಗಳನ್ನು ವ್ಯಕ್ತಿಗತವಾಗಿ ಮೈಗೂಡಿಸಿಕೊಂಡಾಗ ಮಾತ್ರ ಸಮಾಜಮುಖಿ ಕಾರ್ಯ ಮಾಡಲು ಸಾಧ್ಯ, ಅಷ್ಟೇ ಅಲ್ಲದೆ ಉನ್ನತ ಮಟ್ಟದ ಯೋಚನೆ ಹಾಗೂ ಚಿಂತನೆಗಳನ್ನು ಕಾರ್ಯಗತ ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಲಸಚಿವ ಡಾ.ಎ.ಚನ್ನಪ್ಪ ,ಮೌಲ್ಯಮಾಪನ ಕುಲಸಚಿವ ಪ್ರೊ.ಜ್ಯೋತಿ ದಮ್ಮ ಪ್ರಕಾಶ್, ಹಣಕಾಸು ಅಧಿಕಾರಿ ಗಾಯತ್ರಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಪಾರ್ವತಿ.ಸಿ.ಎಸ್., ಡಾ.ಲತಾ.ಎಂ.ಎಸ್ ಸೇರಿ ಅನೇಕರು ಇದ್ದರು.