ಲಿಂಗಸುಗೂರು ಕೃಷಿ ಇಲಾಖೆ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವುದು. ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪಾಟೀಲ್, ಆಟೋ ಚಾಲಕರ ಸಂಘದ ಬಾಬಾಜಾನಿ, ಡಿಎಸ್‌ಎಸ್ ಮುಖಂಡ ಬಸವರಾಜ ಗೋಸ್ಲೆ, ಮುಖಂಡರಾದ ಹನಮಂತ ನೇಲ್ಗಿ, ಬಾಲನಗೌಡ ಪಾಟೀಲ್, ರೈತ ಸಂಘದ ಮುದಗಲ್ ಹೋಬಳಿ ಅಧ್ಯಕ್ಷ ಲಕ್ಷ್ಮಣ ಇತರರಿದ್ದರು. 
ರಾಯಚೂರು

ಕೃಷಿ ಇಲಾಖೆ ಡಿಡಿ ಕಚೇರಿ ಸ್ಥಳಾಂತರಿಸದಿರಿ

ಪ್ರಮುಖ ಮುಖ್ಯಾಂಶಗಳು

  • ಸಂಘಟನೆಗಳಿಂದ
  • ಅನಿರ್ದಿಷ್ಟಾವಧಿ
  • ಧರಣಿ
ಲಿಂಗಸುಗೂರು: ಪಟ್ಟಣದ ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯನ್ನು ಸಿಂಧನೂರಿಗೆ ಸ್ಥಳಾಂತರ ಮಾಡದಂತೆ ಆಗ್ರಹಿಸಿ ಲಿಂಗಸುಗೂರು ಅಭಿವೃದ್ಧಿ ಹೋರಾಟ ಸಮಿತಿ, ವಿವಿಧ ಸಂಘಟನೆಗಳಿಂದ ಸೋಮವಾರ ಕಚೇರಿಯ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಯಿತು.
ಹಲವು ವರ್ಷಗಳಿಂದ ಲಿಂಗಸುಗೂರಿನಲ್ಲಿರುವ ಕೃಷಿ ಉಪ ನಿರ್ದೇಶಕರ ಕಚೇರಿಯಿಂದ ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ತಾಲೂಕು ಭೌಗೋಳಿಕ ವಿಸ್ತೀರ್ಣವೂ ಹೆಚ್ಚಾಗಿದೆ. ಕೃಷಿ ವಹಿವಾಟು, ಉತ್ಪನ್ನಗಳು ಗಣನೀಯ ಪ್ರಮಾಣದಲ್ಲಿ ಅಧಿಕವಾಗಿವೆ.
ಹೀಗಿದ್ದರೂ ರಾಜಕೀಯ ಪ್ರಭಾವ ಬಳಸಿ ಡಿಡಿ ಕಚೇರಿಯನ್ನು ಸಿಂಧನೂರಿಗೆ ಎತ್ತಂಗಡಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಲಿಂಗಸುಗೂರು ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ಆದೇಶ ವಾಪಸ್ ಪಡೆಯುವವರೆಗೂ ಧರಣಿ ಮುಂದುವರಿಸಲಾಗುವುದು ಎಂದು ತಿಳಿಸಿದರು. ಮುಖಂಡರಾದ ಹನುಮಂತ, ಸದಾನಂದ ಮಡಿವಾಳ, ಬಸವರಾಜ ಗೌಡೂರು, ಹನುಮನಗೌಡ, ನಾಗಪ್ಪ ಪುನೇದ, ಹನುಮಂತ ಗೌಂಡಿ, ಬಸಣ್ಣ ಕೋಠಾ, ಮಹ್ಮದ ಖಾಜಾಸಾಬ್ ಇತರರಿದ್ದರು.