ಮಸ್ಕಿಯ ಶಾಸಕರ ಕಚೇರಿ ಮುಂದೆ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘ ಪ್ರತಿಭಟನೆ ನಡೆಸಿತು. 
ರಾಯಚೂರು

ಅನ್ಯರಿಗೆ ಎಸ್ಟಿ ಪ್ರಮಾಣ ಪತ್ರ ನೀಡದಿರಿ

ಮಸ್ಕಿ: ರಾಜ್ಯದಲ್ಲಿ ಬೇರೆ ಜಾತಿಯವರಿಗೆ ಎಸ್ಟಿ ಪ್ರಮಾಣ ಪತ್ರ ನೀಡುವುದನ್ನು ತಡೆಯಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದಿಂದ ಶುಕ್ರವಾರ ಶಾಸಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. 
ಸಮುದಾಯದ ಪ್ರಮುಖ ಮೌನೇಶ ನಾಯಕ ಮಾತನಾಡಿ, ಕೋಲಿ, ಕಬ್ಬಲಿಗ, ತಳವಾರ ಜನಾಂಗದವರು ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಎಸ್ಟಿ ಸಮಾಜದ ಶಾಸಕರು ಇದನ್ನು ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. 
ಕೂಡಲೇ ಶಾಸಕರು, ಅನ್ಯರಿಗೆ ಎಸ್ಟಿ ಜಾತಿ ಪ್ರಮಾಣ ಪತ್ರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಪ್ರಮುಖರಾದ ರಾಘವೇಂದ್ರ ನಾಯಕ ಜಾಲವಾಡಗಿ, ಮರೆಪ್ಪ ನಾಯಕ, ವೆಂಕಟೇಶ ನಾಯಕ, ಗಂಗಾಧರ ನಾಯಕ, ರಮೇಶ ನಾಯಕ, ಹನುಮನಗೌಡ ಜಿನ್ನಾಪುರ, ವೆಂಕಟೇಶ ಮಂಗನಾಳ ಇತರರಿದ್ದರು.