ಜಾಲಹಳ್ಳಿಯಲ್ಲಿ ನಾಡ ಕಚೇರಿಗೆ ನೌಕರ ಶರಣಗೌಡಗೆ ಎಸ್‌ಎಫ್‌ಐ ತಾಲೂಕು ಘಟಕ ಮನವಿ ಸಲ್ಲಿಸಿತು. ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಶಿವು ತಳವಾರ ಓಣಿ, ಅಭಿಷೇಕ, ಮೌನೇಶ ಜಾಲಹಳ್ಳಿ, ರಿಯಾಜ್ ಇತರರಿದ್ದರು. 
ರಾಯಚೂರು

ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ನಾಡಕಚೇರಿ ಮುಂದೆ ಎಸ್‌ಎಫ್‌ಐ ಪ್ರತಿಭಟನೆ
  • ದೇವದುರ್ಗ ಜಾಲಹಳ್ಳಿ ನಾಡ ಕಚೇರಿಗೆ ಮನವಿ
ದೇವದುರ್ಗ: ಖಾಸಗಿ ಶಾಲೆಗಳು ಪಾಲಕರಿಂದ ಅನಧಿಕೃತವಾಗಿ ಡೊನೇಷನ್ ವಸೂಲಿ ಮಾಡುತ್ತಿದ್ದು, ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ತಾಲೂಕಿನ ಜಾಲಹಳ್ಳಿಯ ನಾಡ ಕಚೇರಿ ಮುಂದೆ ಎಸ್‌ಎಫ್‌ಐ ತಾಲೂಕು ಘಟಕ ಪ್ರತಿಭಟನೆ ನಡೆಸಿತು.
ಬೇಸಿಗೆ ರಜೆ ಮುಗಿಯುತ್ತ ಬಂದಿದ್ದು, ಶಾಲಾ-ಕಾಲೇಜುಗಳು ಶೀಘ್ರದಲ್ಲಿ ಪ್ರಾರಂಭವಾಗಲಿವೆ. ಈ ಹಂತದಲ್ಲಿ ಖಾಸಗಿ ಶಾಲೆಗಳು ಪಾಲಕರ ಬೆನ್ನುಬಿದ್ದು ಮಕ್ಕಳನ್ನು ದಾಖಲು ಮಾಡಿಕೊಂಡು ಡೊನೇಷನ್ ಹೆಸರಿನಲ್ಲಿ ಲಕ್ಷಾಂತರ ರೂ. ವಸೂಲಿ ಮಾಡುತ್ತಿವೆ. ಇದು ಕಾನೂನು ಬಾಹಿರವಾಗಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ. 1983ರ ಶಿಕ್ಷಣ ಕಾಯ್ದೆ ಹಾಗೂ 2009ರ ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಇದರಿಂದ ಖಾಸಗಿ ಶಾಲೆಗಳು ಆಡಿದ್ದೇ ಆಟ ಎನ್ನುವಂತಾಗಿದೆ.
ಬಡವರಿಂದ ಲಕ್ಷಾಂತರ ರೂ. ವಸೂಲಿ ಮಾಡುತ್ತಿದ್ದು, ಇದು ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡುತ್ತಿದೆ. ಇದರಿಂದ ಕನ್ನಡ, ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಡೊನೇಷನ್ ಹಾವಳಿ ತಡೆಯಲು ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ರಚನೆ ಮಾಡಬೇಕು. ಶುಲ್ಕದ ವಿಷಯದಲ್ಲಿ ಪಾರದರ್ಶಕತೆ ತರಬೇಕು. ಅನಧಿಕೃತ ಕೋಚಿಂಗ್ ಸೆಂಟರ್ ವಿರುದ್ಧ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಮಹಾಲಿಂಗ ದೊಡ್ಡಮನಿ, ಮುಖಂಡರಾದ ಶಿವು ತಳವಾರ ಓಣಿ, ಅಭಿಷೇಕ, ಮೌನೇಶ ಜಾಲಹಳ್ಳಿ, ರಿಯಾಜ್, ರಾಜು ನಾಯಕ, ಬಸವರಾಜ ಲಿಂಗದಹಳ್ಳಿ, ನಿಂಗಯ್ಯ, ಹನುಮಂತ, ಯಲ್ಲಪ್ಪ, ಗೋಪಿ ಊಟಿ ಇತರರಿದ್ದರು.