ಮಾನ್ವಿಯಲ್ಲಿ ಉಪತಹಸೀಲ್ದಾರ್ ವಿನಾಯಕ ರಾವ್‌ಗೆ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಎಂ.ಡಿ.ಜಾಫರ್, ತಾಲೂಕಾಧ್ಯಕ್ಷ ಹನುಮೇಶ್ ಕಾತರಕಿ, ದೊಡ್ಡ ನರಸಪ್ಪ, ನರಸಪ್ಪ ಕಾತರಕಿ, ವೀರೇಶ್ ಇದ್ದರು. 
ರಾಯಚೂರು

ಅಂಗವಿಕಲರ ಕುಂದುಕೊರತೆ ಸಭೆ ನಡೆಸಿ

ನರೇಶ್ ಕುಮಾರ್
ಮಾನ್ವಿ: ಅಂಗವಿಕಲರ ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಸಾಮಾಜಿಕ ಭದ್ರತೆ ಹಾಗೂ ಪುನರ್ವಸತಿಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡಲೇ ಸಭೆ ಕರೆಯಬೇಕು ಎಂದು ಒತ್ತಾಯಿಸಿ ವಿಕಲಚೇತನರ ಆರ್‌ಪಿಡಿ ಟಾಸ್ಕ್‌ಫೋರ್ಸ್ ತಾಲೂಕು ಸಮಿತಿ ಶುಕ್ರವಾರ ಉಪ ತಹಸೀಲ್ದಾರ್ ವಿನಾಯಕ ರಾವ್‌ಗೆ ಮನವಿ ಸಲ್ಲಿಸಿತು. 
ಜಿಲ್ಲಾಧ್ಯಕ್ಷ ಎಂ.ಡಿ. ಜಾಫರ್ ಮಾತನಾಡಿ, ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಅಂಗವಿಕಲರು ಪಡೆಯಲು ಸಾಧ್ಯವಾಗಿಲ್ಲ. ಅಂಗವಿಕಲರ ಹಕ್ಕುಗಳು ಬಗ್ಗೆ ತಿಳಿದುಕೊಂಡು ಪರಿಹಾರಕ್ಕಾಗಿ ಶೀಘ್ರವೇ ತಾಲೂಕು ಮಟ್ಟದ ಕುಂದು ಕೊರತೆ ಸಭೆ ಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು. 
ತಾಲೂಕಾಧ್ಯಕ್ಷ ಹನುಮೇಶ್ ಕಾತರಕಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಸದಸ್ಯರಾದ ಸತ್ಯಪ್ಪಯ್ಯ ಇತರರಿದ್ದರು.