ನೀರಮಾನ್ವಿ ಸದ್ಗುರು ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಸದ್ಗುರು ಬಸವಾನಂದರ 19ನೇ ವಾರ್ಷಿಕ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿದರು. ಸದ್ಗುರು ಸೇವಕ ಅಭಿನವ ನಿಜಗುಣ ಸ್ವಾಮೀಜಿ, ನರಸಪ್ಪ ಕುರುಬುರು, ನಿಂಗಪ್ಪ ಚಾಗಿ ಇದ್ದರು.
- ಭಕ್ತಿ
- ಪುಣ್ಯಸ್ಮರಣೋತ್ಸವ
- ಗುರುವಂದನಾ
ಭಕ್ತಿಯಿಂದ ನಡೆದರೆ ಕಷ್ಟ ಪರಿಹಾರ
ಮಾನ್ವಿ: ಗುರುವಿನ ಮೇಲೆ ಭಕ್ತಿ ಇಟ್ಟರೆ ಸದ್ಗುರು ಸಿದ್ಧಾರೂಢರು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುತ್ತಾರೆ ಎಂದು ಹುಬ್ಬಳ್ಳಿ ಶಾಂತಾಶ್ರಮದ ಸದ್ಗುರು ಅಭಿನವ ಸಿದ್ಧಾರೂಢ ಸ್ವಾಮೀಜಿ ಹೇಳಿದರು.
ನೀರಮಾನ್ವಿ ಸದ್ಗುರು ಸಿದ್ಧಾರೂಢ ಮಠದಲ್ಲಿ ಶುಕ್ರವಾರ ಸದ್ಗುರು ಬಸವಾನಂದರ 19ನೇ ವಾರ್ಷಿಕ ಪುಣ್ಯಸ್ಮರಣೋತ್ಸವ, ಸದ್ಗುರು ಸಿದ್ದಲಿಂಗಪ್ಪ ತಾತ ಅವರ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರು ಒತ್ತಡದ ಬದುಕಿಗೆ ಸಿಲುಕಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮನುಷ್ಯ ಶಾಂತ ಚಿತ್ತನಾಗಿ, ಜ್ಞಾನವಂತನಾಗಿ ಇರಬೇಕು ಎಂದರು.
ಸದ್ಗುರು ಸೇವಕ ಅಭಿನವ ನಿಜಗುಣ ಸ್ವಾಮೀಜಿ ಮಾತನಾಡಿ, ನಮ್ಮ ಮನಸ್ಸನ್ನು ಅಧೀನದಲ್ಲಿ ಇಟ್ಟುಕೊಳ್ಳಬೇಕು. ಸದ್ಗುರು ಬಸವಾನಂದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಾಗ ನಾವು ಪಾವನರಾಗುತ್ತೇವೆ.
ಸದ್ಗುರುವಿನ ಸೇವೆ ಮಾಡಿ ಅಧ್ಯಾತ್ಮದ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಗುರುವಿನ ಮಾರ್ಗದಲ್ಲಿ ನಡೆಯಬೇಕು ಎಂದು ಭಕ್ತರಿಗೆ ಸಲಹೆ ನೀಡಿದರು. ಬಾಗಲಕೋಟೆಯ ಪರಮಾತ್ಮರೂಢ ಸ್ವಾಮೀಜಿ, ಪಾಲಭಾವಿ ವೀರಯ್ಯಸ್ವಾಮಿ, ಮಠಮಾರಿಯ ಜ್ಞಾನಾನಂದ ಸ್ವಾಮೀಜಿ, ಮಲದಕಲ್ನ ಗುರುಬಸವ ರಾಜಗುರು ಮಾತನಾಡಿದರು.
ಶಕ್ತಿನಗರ ವೇದಾಂತ ಬಳಗದ ಮಾತೋಶ್ರೀ ಸರಳ, ಪ್ರಭು, ನಿಜಾನಂದ ಆಧ್ಯಾತ್ಮಿಕ ತಪೋವನದ ಹನುಮಂತ್ರಾಯ ಶರಣರು, ಶಿವರಾಜಪ್ಪ ಕಪಗಲ್, ಸದಾನಂದ ಮಹಾರಾಜರು ಸೇರಿದಂತೆ ಇತರರು ಇದ್ದರು. ಬೆಳಗ್ಗೆಯಿಂದ ರಾತ್ರಿವರೆಗೆ ಬಸವಾನಂದರ ಶಿಲಾಮೂರ್ತಿ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗಿತು. ಸದ್ಗುರು ಬಸವಾನಂದರ 19ನೇ ವಾರ್ಷಿಕ ಪುಣ್ಯಸ್ಮರಣೋತ್ಸವದ ಅಂಗವಾಗಿ ಸಂಜೆ 4.30ಕ್ಕೆ ಉಚ್ಚಾಯ ಮಹೋತ್ಸವ ನೆರವೇರಿತು.