ಆರೋಲಿ ಗ್ರಾಮದಲ್ಲಿ ಗ್ರಾಮ ದೇವತೆ ಹುಲಿಗೇಮ್ಮದೇವಿ ದೇವಸ್ಥಾನದ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಸವನಗೌಡ ದದ್ದಲ್ ಚಾಲನೆ ನೀಡಿದರು. ಪ್ರಮುಖರಾದ ಸೋಮಶೇಖರಗೌಡ ಹರನಹಳ್ಳಿ, ದೇವಸ್ಥಾನ ಅರ್ಚಕ ಉದಯ ಪೂಜಾರಿ, ಹುಲಿಗೆಪ್ಪ, ಯಂಕಣ್ಣ, ನಾಘಪ್ಪ, ಪರಶುರಾಮ, ಎಂಪಿ ರಾಮುಲು ಇತರರಿದ್ದರು. 
ರಾಯಚೂರು

2.25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯುತ್
  • ದೀಪಗಳ
  • ವ್ಯವಸ್ಥೆ

ಮಾನ್ವಿ: ಆರೋಲಿ ಗ್ರಾಮದ ಗ್ರಾಮದೇವತೆ ಹುಲಿಗೇಮ್ಮದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ 2.25 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಚಾಲನೆ ನೀಡಿದರು.

ನಂತರ ಮಾತನಾಡಿ, ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕೆ.ಕೆ.ಆರ್.ಡಿ.ಬಿ. ಮೈಕ್ರೋ ಯೋಜನೆಯಡಿ ದೇವಸ್ಥಾನದ ಹತ್ತಿರ 1.75 ಕೋಟಿ ರೂ.ಸಿ.ಸಿ. ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆಯನ್ನು ಮಾಡಲಾಗಿದೆ.

50ಲಕ್ಷ ರೂ. ವೆಚ್ಚದಲ್ಲಿ ಶೌಚಗೃಹ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿಗಾಗಿ ಟ್ಯಾಂಕ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ ನಿರ್ಮಾಣ ಸಂಸ್ಥೆಯವರು ಉತ್ತಮ ಗುಣಮಟ್ಟದಲ್ಲಿ ಕಾಮಗಾರಿಯನ್ನು ಕೈಗೊಳ್ಳುವಂತೆ ತಿಳಿಸಿದರು. ಕಂದಾಯ ನೀರಿಕ್ಷಕ ಜೆಲ್ಲಿ ಹನುಮಂತಪ್ಪ, ವಿಎ ಯಲ್ಲಪ್ಪ ಇನ್ನಿತರರು ಇದ್ದರು.