ಮಾನ್ವಿಯ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು. ಯೋಗ ಗುರು ಅನ್ನದಾನಯ್ಯಸ್ವಾಮಿ, ಪ್ರಮುಖರಾದ ಪ್ರಕಾಶಬಾಬು, ಅರುಣಕುಮಾರ್ ಇತರರಿದ್ದರು. 
ರಾಯಚೂರು

ನೈತಿಕಮೌಲ್ಯ ಹೆಚ್ಚಿಸಲು ಉತ್ತಮ ಅಭ್ಯಾಸ ರೂಢಿಸಿಕೊಳ್ಳಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಮಾರೋಪ ಕಾರ್ಯಕ್ರಮ

ನೈತಿಕಮೌಲ್ಯ ಹೆಚ್ಚಿಸಲು ಉತ್ತಮ ಅಭ್ಯಾಸ ರೂಢಿಸಿಕೊಳ್ಳಿ

ಮಾನ್ವಿ: ಪ್ರತಿದಿನ ಯೋಗ ಮಾಡುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಯೋಗ ಗುರು ಅನ್ನದಾನಯ್ಯಸ್ವಾಮಿ ಹೇಳಿದರು.
ಪಟ್ಟಣದ ನೀಲಕಂಠೇಶ್ವರ ಕಲ್ಯಾಣ ಮಂಟಪದಲ್ಲಿ ಯೋಗಸನ್ನಿಧಿ ಜ್ಞಾನ ವಿದ್ಯಾಪೀಠ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಂಸ್ಕಾರ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೈತಿಕಮೌಲ್ಯ ಹೆಚ್ಚಿಸಲು ಯೋಗಾಸನ, ಭಗವದ್ಗೀತೆ, ಭಜನೆಯಂಥ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ಸುಖದೇವ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಸಂಜೀವ್ ಸುಧಾಕರ್, ಉರ್ದು ಪ್ರೌಢಶಾಲೆ ಮುಖ್ಯಶಿಕ್ಷಕ ಅಶೋಕ ಕುಮಾರ್ ಚಿಂಚೋಳಿ, ಪ್ರಮುಖರಾದ ಪ್ರಕಾಶಬಾಬು, ಅರುಣಕುಮಾರ್, ಮಲ್ಲೇಶ ನಾಯಕ, ವಿಜಯಕುಮಾರ್ ಇತರರಿದ್ದರು.