ದೇವದುರ್ಗದಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಪಿಐ ಎಸ್.ಮಂಜುನಾಥ ಚಾಲನೆ ನೀಡಿದರು. ಮಲದಕಲ್ ಯೋಗಾಶ್ರಮದ ಬಸವರಾಜ ರಾಜಗುರು, ಗರುಡವಾಹನ ನಾಯಕ, ಬಸವರಾಜ ಕೊಪ್ಪರ, ಅಮರೇಶ ಜರದಬಂಡಿ ಇತರರಿದ್ದರು. 
ರಾಯಚೂರು

ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಿ

ನರೇಶ್ ಕುಮಾರ್
ದೇವದುರ್ಗ: ಪ್ರತಿಯೊಂದು ರಂಗದಲ್ಲೂ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಹಾಗೂ ಯುವಜನತೆ ಒಡ್ಡಿಕೊಳ್ಳಬೇಕು. ಅಂದಾಗ ಮಾತ್ರ ಗುರಿಮುಟ್ಟಲು ಸಾಧ್ಯ ಎಂದು ಪಿಐ ಎಸ್.ಮಂಜುನಾಥ ಹೇಳಿದರು.
ಮಲದಕಲ್ ಶ್ರೀಹುಡೇದ್ ಆಂಜನೇಯ ಜಾತ್ರೆ ನಿಮಿತ್ತ ಪಟ್ಟಣದ ಖೇಣೇದ್ ಕಲ್ಯಾಣ ಮಂಟಪದಲ್ಲಿ ಮಲದಕಲ್ ಗೆಳೆಯರ ಬಳಕ ಹಾಗೂ ಜ್ಞಾನವೃಕ್ಷ ಟ್ರಸ್ಟ್‌ನಿಂದ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು. 
ಪ್ರತಿಭೆ ಇದ್ದರೆ ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಹೀಗಾಗಿಯೇ ಜ್ಞಾನವೇ ನಿಮ್ಮ ಸಂಪತ್ತು ಆಗಬೇಕಿದೆ. ಜ್ಞಾನವಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಪಡೆಯುವ ಜತೆಗೆ ಅಂದುಕೊಂಡ ಗುರಿ ಸಾಧಿಸಬಹುದು ಎಂದರು. 
ಮಲದಕಲ್ ಯೋಗಾಶ್ರಮದ ಬಸವರಾಜ ರಾಜಗುರು ಸಾನ್ನಿಧ್ಯವಹಿಸಿದ್ದರು. ಪ್ರಾಚಾರ್ಯ ಗರುಡವಾಹನ ನಾಯಕ, ಕೌಟಿಲ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಕೊಪ್ಪರ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನರಸಿಂಗರಾವ್ ಸರ್ಕೀಲ್, ಯೋಧ ಅಮರೇಶ ಜರದಬಂಡಿ, ಡಾ.ಮಾರುತಿ, ರವಿಕುಮಾರ, ಡಾ.ಸಾಬಣ್ಣ ನಾಯಕ, ಪಿಡಿಒ ಶರಣು ಪಾಟೀಲ್ ಇದ್ದರು.