ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೇವದುರ್ಗದ ಮಿನಿ ವಿಧಾನಸೌಧ ಮುಂದೆ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘಗಳು ಪ್ರತಿಭಟನೆ ನಡೆಸಿದವು. ಸಿಐಟಿಯು ತಾಲೂಕು ಅಧ್ಯಕ್ಷ ಕಂಠೆಪ್ಪ, ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ, ಪ್ರಮುಖರಾದ ತಿಪ್ಪಯ್ಯ ನಾಯಕ, ಮಾನಸಯ್ಯ, ಮಹಮ್ಮದ್ ಯೂಸೂಫ್, ಶಿವಪ್ಪ, ಚಂದಪ್ಪ, ಸಿದ್ದಯ್ಯ ಇದ್ದರು.  
ರಾಯಚೂರು

ದೇವದುರ್ಗದಲ್ಲಿ ಕಾರ್ಮಿಕ ಸಂಘಟನೆಗಳ ಆಗ್ರಹ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • Provide accommodation for porters

ಹಮಾಲರಿಗೆ ವಸತಿ ಸೌಲಭ್ಯ ಕಲ್ಪಿಸಿ 

ದೇವದುರ್ಗದಲ್ಲಿ ಕಾರ್ಮಿಕ ಸಂಘಟನೆಗಳ ಆಗ್ರಹ 

ದೇವದುರ್ಗ: ದಿನಗೂಲಿ ಆಧಾರದಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸುವುದು, ವಸತಿ ಸೌಲಭ್ಯ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧ ಮುಂದೆ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಹಾಗೂ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘ(ಸಿಐಟಿಯು ಸಂಯೋಜಿತ) ಶುಕ್ರವಾರ ಜಂಟಿ ಪ್ರತಿಭಟನೆ ನಡೆಸಿದವು.
ಸಿಐಟಿಯು ತಾಲೂಕು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಮಾತನಾಡಿ, ರಾಜ್ಯದ ಎಪಿಎಂಸಿ, ಬಜಾರ್, ರೈಲ್ವೆ ಹಾಗೂ ಬಸ್ ನಿಲ್ದಾಣದಲ್ಲಿ ಸಾವಿರಾರು ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ಅವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸದೆ ಅನ್ಯಾಯ ಮಾಡಿದೆ. ಅಲ್ಲದೆ, ಕಾರ್ಮಿಕರಿಗೆ ಇದ್ದ ಸೌಲಭ್ಯಗಳನ್ನು ಕಡಿತ ಮಾಡುವ ಹುನ್ನಾರದಿಂದ ಕೇಂದ್ರ ಸರ್ಕಾರ ಕಾರ್ಮಿಕ ನೀತಿಸಂಹಿತೆ ಜಾರಿಗೊಳಿಸಿದದೆ. ಇದರಿಂದ ಜೀವನ ಭದ್ರತೆ ಇಲ್ಲದಂತೆ ಅಪಾಯದಲ್ಲಿ ದುಡಿಯುವ ಸ್ಥಿತಿಯಿದೆ ಎಂದು ಆರೋಪಿಸಿದರು.
ಕೂಡಲೇ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಪ್ರತ್ಯೇಕ ಕಲ್ಯಾಣ ಮಂಡಳಿ ಸ್ಥಾಪಿಸಬೇಕು. ಎಲ್ಲ ಕಾರ್ಮಿಕರಿಗೆ ನಿವೇಶನ, ವಸತಿ ಸೌಲಭ್ಯ ಜಾರಿಗೊಳಿಸಬೇಕು. ಕಾರ್ಮಿಕರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಉದ್ಯೋಗ ಭದ್ರತೆ ನೀಡಬೇಕು. ಸಹಜ ಸಾವಿಗೆ ತುತ್ತಾದರೆ 1ಲಕ್ಷ ರೂ. ಪರಿಹಾರ, ಶವಸಂಸ್ಕಾರಕ್ಕೆ 25 ಸಾವಿರ ರೂ. ನೀಡಬೇಕು. ಕಾರ್ಮಿಕರ ಭವಿಷ್ಯನಿಧಿ ಯೋಜನೆ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿವೃತ್ತಿ ಪರಿಹಾರ, ಗ್ರಾೃಚುಟಿ, ಇಡಿಗಂಟು, ವೈದ್ಯಕೀಯ ಸೌಲಭ್ಯ ಹಾಗೂ ಇ-ಶ್ರಮ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಫೆಡರೇಷನ್ ರಾಜ್ಯ ಉಪಾಧ್ಯಕ್ಷ ತಿಪ್ಪಯ್ಯ ನಾಯಕ, ತಾಲೂಕು ಅಧ್ಯಕ್ಷ ಕಂಠೆಪ್ಪ, ಕಾರ್ಯದರ್ಶಿ ಮಾನಸಯ್ಯ, ಪ್ರಮುಖರಾದ ಮಹಮ್ಮದ್ ಯೂಸೂಫ್, ಶಿವಪ್ಪ, ಚಂದಪ್ಪ, ಸಿದ್ದಯ್ಯ, ಹನುಮಯ್ಯ, ಕಾಳೆಶಂಕರ್, ತಿಪ್ಪಯ್ಯ, ಯಂಕಪ್ಪ, ಕರೆಪ್ಪ, ಹನುಮಯ್ಯ, ಸಿದ್ದಪ್ಪ ಗಾಲಿ, ನರಸಪ್ಪ, ಯಲ್ಲಗೌಡ, ಈಶಪ್ಪ, ಕೆ.ಶಿವಪ್ಪ, ಸಿದ್ದಪ್ಪ ಇತರರಿದ್ದರು.