ರಾಯಚೂರು ನಗರದ ಆಟೋ ಚಾಲಕನ ಪುತ್ರ ವಿಕಾಶ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 594 (ಶೇ.99) ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮೂಲತಃ ರಾಯಚೂರು ನಗರದ ನಿವಾಸಿಯಾದ ವಿಕಾಶ ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿದ್ದು, ತಂದೆ ಆಟೋ ಚಾಲಕನಾಗಿದ್ದರು ಮಗನಿಗೆ ಉತ್ತಮ ಅಬ್ಯಾಸ ಮಾಡಿಸಿದ್ದಾರೆ. ಇವರು ನಗರದ ವಿದ್ಯಾನಿಧಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡಿದ್ದು, ಪೋಷಕರ ಆಸೆಯಂತೆ ಲೆಕ್ಕ ಪರಿಶೋಧನೆಯಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದಾನೆ.
ಕಾಲೇಜಿನ ಉಪನ್ಯಾಸಕರ ಹಾಗೂ ತಂದೆ ತಾಯಿಗಳ ಪ್ರೋತ್ಸಾಹದಿಂದ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗಿದ್ದು ಮುಂದೆ ಇದೇ ರೀತಿ ವಿದ್ಯಾಭ್ಯಾಸ ಮುಂದುವರಿಸಿ ಸಿಎ ಮಾಡಿ ಲೆಕ್ಕ ಪರಿಶೋಧನೆಯಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ನಾನು ಅನೇಕ ನನ್ನಂತ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕಂಬ ಆಸೆ ಇದೆ.
ವಿಕಾಸ ವಾಣಿಜ್ಯ ವಿಭಾಗ 594 (ಶೇ.99)