ಸಿಂಧನೂರು ತಾಲೂಕಿನ ಕಲ್ಮಂಗಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿದರು. ಪ್ರಮುಖರಾದ ಪಂಪನಗೌಡ ಜಾಲಿಹಾಳ, ಶೇಖರಯ್ಯಸ್ವಾಮಿ, ಶರಣಯ್ಯಸ್ವಾಮಿ, ರಾಮಣ್ಣ ನಾಯಕ ಇತರರಿದ್ದರು. 
ರಾಯಚೂರು

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್‌ಗೆ ಬೇಡಿಕೆ

ನರೇಶ್ ಕುಮಾರ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿಕೆ
ಸಿಂಧನೂರು: ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಕೋಟಾದಡಿ ಸಚಿವ ಸ್ಥಾನ ನೀಡುವಂತೆ ಹಲವರು ಮನವಿ ಮಾಡಿದ್ದು, ನಾನು ಕೂಡ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು. 
ತಾಲೂಕಿನ ಕಲಮಂಗಿ ಗ್ರಾಮದಲ್ಲಿ ಕಲಮಂಗಿ-ನವಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಭಾನುವಾರ ಮಾತನಾಡಿದರು. 
2021ರಲ್ಲಿ ಬಿಜೆಪಿ ಆಡಳಿತದಲ್ಲಿತ್ತು. ಆದರೆ, ಮಸ್ಕಿ ಉಪಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ, ಸಚಿವರು ಹಣದ ಹೊಳೆ ಹರಿಸಿದರೂ ಮಸ್ಕಿ ಕ್ಷೇತ್ರದ ಮತದಾರರು ಹಣಕ್ಕೆ ಬೆಲೆ ಕೊಡದೆ 36 ಸಾವಿರ ಮತಗಳ ಅಂತರದಲ್ಲಿ ನನ್ನನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಿದರು. ಎರಡು ಪರಿಶಿಷ್ಟ ಪಂಗಡದ ಸಚಿವ ಸ್ಥಾನದಲ್ಲಿ ಒಂದು ಮಸ್ಕಿ ಕ್ಷೇತ್ರದ ಶಾಸಕರಿಗೆ ಕೊಡಿ ಎಂದು ಮುಖಂಡರ ಒತ್ತಾಯವಿದೆ. ನಾನು ಕೂಡ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿರುವೆ ಎಂದರು.
ಕಲಮಂಗಿ-ನವಲಿ ಮಾರ್ಗದಲ್ಲಿ ಸಿಸಿ ರಸ್ತೆ, ಚರಂಡಿ, ಸ್ಟ್ರೀಟ್ ಲೈಟ್ ನಿರ್ಮಾಣ ಮಾಡಲು 2.50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇನ್ನುಳಿದ 2.5 ಕಿಮೀ ರಸ್ತೆಯನ್ನು ಮುಂದಿನ ದಿನಗಳಲ್ಲಿ ಬರುವ ಅನುದಾನದಲ್ಲಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. 
ಪ್ರಮುಖರಾದ ಪಂಪನಗೌಡ ಜಾಲಿಹಾಳ, ಶೇಖರಯ್ಯಸ್ವಾಮಿ, ಶರಣಯ್ಯಸ್ವಾಮಿ, ದಯಾನಂದಸ್ವಾಮಿ, ರಾಮಣ್ಣ ನಾಯಕ, ತಿಮ್ಮಣ್ಣ ಹೊಸಮನಿ, ಬಸವರಾಜ ಹಳೇಮನಿ, ವೀರಭದ್ರಗೌಡ ಹಳೇಮನಿ, ಗ್ರಾಪಂ ಮಾಜಿ ಅಧ್ಯಕ್ಷ ಆಂಜನೇಯ, ಬಸನಗೌಡ  ಡಿಶ್, ಗ್ರಾಪಂ ಪಿಡಿಒ ಹುಚ್ಚಪ್ಪ, ಪಿಡಬ್ಲುೃಡಿ ಜೆಇ ರಾಜಕುಮಾರ, ಗುತ್ತಿಗೆದಾರ ಶರಣಬಸವ ಇತರರಿದ್ದರು.