ರಾಯಚೂರು ಜಿಲ್ಲೆಯಲ್ಲಿ ಜೋಳ ಖರೀದಿ ಹೆಸರಿನಲ್ಲಿ ಭಾರಿ ಅಕ್ರಮ ನಡೆಯುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಶಾಸಕರುಗಳು ಸಂಬಂಧವೇ ಇಲ್ಲದಂತೆ ಕುಳಿತಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳ ಸಮಸ್ಯೆಯನ್ನು ಪರಿಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲ ದಲ್ಲಾಳಿಗಳು ನೆರೆಯ ಅಂಧ್ರದಲ್ಲಿ ಕಡಿಮೆ ಬೆಲೆ ಜೋಳ ಖರೀದಿಸಿ ಜಿಲ್ಲೆಗೆ ತಂದು ಮಾರಾಟ ಮಾಡುವ ವ್ಯವಸ್ಥೆ ನಡೆಯುತ್ತಿದೆ. ಭತ್ತ ಬೆಳೆದ ಜಮೀನನ್ನು ಜೋಳವೆಂದು ಜಿಪಿಎಸ್ ಮಾಡಿ ವಂಚಿಸಲಾಗುತ್ತಿದೆ. ಸಿರವಾರ, ರಾಯಚೂರು, ಮಾನ್ವಿ ಸೇರಿ ಅನೇಕ ತಾಲೂಕಗಳಲ್ಲಿ ಅಕ್ರಮ ನಡೆಯುತ್ತಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ಫೆ.19 ರಂದು ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿಗಳುಮರು ಸಮೀಕ್ಷೆಗೆ ಆದೇಶ ನೀಡಿದ್ದಾರೆ. ಸಮೀಕ್ಷೆಯೂ ಸಮರ್ಪಕವಾಗಿ ನಡೆದಿಲ್ಲ.
ಭತ್ತ ಕಟಾವು ಮಾಡಿದ ಜಮೀನನಲ್ಲಿ ಹಿಂಗಾರು ಜೋಳವೆಂದು ಜಿಪಿಎಸ್ ಮಾಡಿ ನೊಂದಣಿ ಮಾಡಲಾಗುತ್ತಿದೆ. ಜೋಳ ಬೆಳೆದ ರೈತರು ಮಾರಾಟ ಮಾಡದೇ ಉಳಿಸಿಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಜೋಳ ಖರೀಧಿ ಕೇಂದ್ರಗಳೇ ಪ್ರಾರಂಭವಾಗಿಲ್ಲ. ಕೂಡಲೇ ಖರೀಧಿ ಪ್ರಾರಂಭಿಸಬೇಕೆಂದರು. ಕಳೆದವೂ ಜೋಳ ಖರೀದಿಯಲ್ಲಿ ಅಕ್ರಮವಾಗಿತ್ತು. ಆಗಲೂ ಯಾವ ಕ್ರಮವೂ ಆಗದೇ ಇಲ್ಲ. ಆಹಾರ ಇಲಾಖೆ ಅಧಿಕಾರಿಗಳು ಬೇಜವಬ್ದಾರಿಯಿಂದ ಖರೀಧಿ ಕೇಂದ್ರಗಳು ನಿರ್ವಹಿಸಿದಂತಾಗಿದೆ ಎಂದರು.
ತುಂಗಭದ್ರಾ ಜಲಾಶಯ ಕ್ರಸ್ಟೇಗೇಟ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಆದರೆ ಕಾಲುವೆ ವ್ಯಾಪ್ತಿಯ 18 ಸ್ಥಳಗಳಲ್ಲಿ ದುರಸ್ತಿ ಕಾರ್ಯ ನಡೆಸಲು ಅವಕಾಶವಿತ್ತು. ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿಯವರು 200 ಕೋಟಿ ರೂ. ಸರ್ಕಾರ ಅನುದಾನ ನೀಡುತ್ತದೆ. ಕಾಲುವೆ ದುರಸ್ತಿ ನಡೆಸಲಾಗುತ್ತದೆ ಎಂದು ಭರವಸೆ ನೀಡಿದ್ದರು.ಯಾವು ಕೆಲಸವೂ ನಡೆಯಲೇ ಇಲ್ಲ. ಈಗಾಗಲೇ ಒಂದು ಬೆಳೆ ಕಳೆದುಕೊಂಡ ರೈತರು ಆರ್ಥಿಕನಷ್ಟಕ್ಕೆ ಗುರಿಯಾಗಿದ್ದಾರೆ. ಸೋರುತ್ತಿರುವ, ಶಿಥಿಲಗೊಂಡಿರುವ ಎಡದಂಡೆ ಕಾಲುವೆ ದುರಸ್ತಿ ಮಾಡಿಲ್ಲ. ಜಲಸಂಪನ್ಮೂಲ ಸಚಿವರು ಸಂಬಂಧವೇ ಇಲ್ಲದಂತೆ ಇದ್ದಾರೆ. ಜಿಲ್ಲೆ ಎಲ್ಲಾ ಪಕ್ಷದ ಶಾಸಕರುಗಳು ಸಹ ಸರ್ಕಾರದ ಮೇಲೆ ಒತ್ತಡ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಉಪಾಧ್ಯಕ್ಷ ಬೂದಯ್ಯಸ್ವಾಮಿ, ಶಂಕರಗೌಡ , ಬ್ರಹ್ಮಯ್ಯ ಆಚಾರ್ಯ ಇದ್ದರು.