ಸಿಂಧನೂರಿನಲ್ಲಿ ಸಾರಿಗೆ ಘಟಕ ಹೆಚ್ಚುವರಿ ವ್ಯವಸ್ಥಾಪಕ ಮರಿಯಪ್ಪಗೆ ಕಲ್ಲೂರು ಗ್ರಾಮ, ಮುಳ್ಳೂರು ಹಾಗೂ ಬೂತಲದಿನ್ನಿ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಶ್ರೀನಿವಾಸ, ಕಾರ್ತಿಕ, ನಾಗೇಶ, ಕರಿಯಣ್ಣ, ವೆಂಕಟೇಶ, ರೋಜಾ, ಕೃತಿಕಾ, ಗುರಮ್ಮ ಇದ್ದರು. 
ರಾಯಚೂರು

ನಮ್ಮೂರು ಕ್ರಾಸ್ ಬಳಿ ಬಸ್ ನಿಲ್ಲಿಸಿ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಘಟಕ ಹೆಚ್ಚುವರಿ ವ್ಯವಸ್ಥಾಪಕಗೆ ಮನವಿ
  • ಸಿಂಧನೂರು ಕಲ್ಲೂರು, ಮುಳ್ಳೂರು, ಬೂತಲದಿನ್ನಿ ವಿದ್ಯಾರ್ಥಿಗಳ ಒತ್ತಾಯ
ಸಿಂಧನೂರು: ಕಲ್ಲೂರು, ಮುಳ್ಳೂರು, ಬೂತಲದಿನ್ನಿ ಕ್ರಾಸ್‌ನಲ್ಲಿ ಮಸ್ಕಿ ಹಾಗೂ ಸಿಂಧನೂರು ಡಿಪೋ ಬಸ್‌ಗಳನ್ನು ನಿಲ್ಲಿಸಲು ಒತ್ತಾಯಿಸಿ ವಿದ್ಯಾರ್ಥಿಗಳು ಸಾರಿಗೆ ಘಟಕ ಹೆಚ್ಚುವರಿ ವ್ಯವಸ್ಥಾಪಕ ಮರಿಯಪ್ಪಗೆ ಶುಕ್ರವಾರ ಮನವಿ ಸಲ್ಲಿಸಿದರು.
ಮಸ್ಕಿ ಮಾರ್ಗದಲ್ಲಿ ಬರುವ ಕಲ್ಲೂರು ಗ್ರಾಮ ಹಾಗೂ ಮುಳ್ಳೂರು, ಬೂತಲದಿನ್ನಿ ಕ್ರಾಸ್‌ನಿಂದ ನೂರಾರು ವಿದ್ಯಾರ್ಥಿಗಳು ಸಿಂಧನೂರಿನ ಶಾಲಾ-ಕಾಲೇಜ್‌ಗಳಿಗೆ ಬರುತ್ತಾರೆ. ಆದರೆ, ಮಸ್ಕಿ ಮತ್ತು ಸಿಂಧನೂರು ಸಾರಿಗೆ ಘಟಕದ ಬಸ್‌ಗಳು ನಿಲುಗಡೆ ಮಾಡದೆ ಬರುತ್ತಿದ್ದು, ಇದರಿಂದ ನಿತ್ಯವೂ ವಿದ್ಯಾರ್ಥಿಗಳು ಎರಡು ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ.
ಆಟೋಗಳಿಗೆ ಬಂದರೆ 40ರೂ.ಬೇಕು. ಕಳೆದ ತಿಂಗಳಿನಿAದಲೂ ಈ ಸಮಸ್ಯೆ ಎದುರಿಸುತ್ತಿದ್ದರೂ ಪರಿಹಾರವಾಗಿಲ್ಲ. ಮಸ್ಕಿ ಡಿಪೋದ ಹಂಪನಾಳ ಬಸ್, ಸಿಂಧನೂರು ಘಟಕದ ಎಲ್ಲ ಬಸ್‌ಗಳು ನಿಲುಗಡೆಗೆ ಕ್ರಮಕೈಗೊಂಡು ಅನುಕೂಲ ಕಲ್ಪಿಸಬೇಕೆಂದು ಕೋರಿದರು. ವಿದ್ಯಾರ್ಥಿಗಳಾದ ಶ್ರೀನಿವಾಸ, ಕಾರ್ತಿಕ, ನಾಗೇಶ, ಕರಿಯಣ್ಣ, ವೆಂಕಟೇಶ, ರೋಜಾ, ಕೃತಿಕಾ, ಗುರಮ್ಮ, ಉಮಾದೇವಿ, ಪ್ರಮುಖರಾದ ಬಸವಂತರಾಯ, ನಾಗಪ್ಪ, ಹನುಮೇಶ ಇದ್ದರು.