ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮತ್ತು ವಸತಿ ರಹಿತರಿಗೆ ವಸತಿ ನೀಡಲು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಸೋಮವಾರ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ಪ್ರಮುಖರಾದ ಆಂಜನೇಯ ಕುರುಬದೊಡ್ಡಿ, ಲಕ್ಷ್ಮಣ ಮಂಡಲಗೇರಾ, ಗೋವಿಂದ ದಾಸ್, ಬಂಗಾರಿ ನರಸಿಂಹಲು, ಹುಲಿಗೆಪ್ಪ ಕೆಆರ್‌ಎಸ್, ಗುರುರಾಜ ಗ್ರೂಕೂಸೌ ಇದ್ದರು. 
ರಾಯಚೂರು

ವಸತಿ ರಹಿತರಿಗೆ ವಸತಿ ನೀಡಲು ಒತ್ತಾಯ

ರಾಯಚೂರು
ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮತ್ತು ವಸತಿ ರಹಿತರಿಗೆ ವಸತಿ ನೀಡಲು ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಸೋಮವಾರ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು.

ಬಗರ್‌ಹುಕುಂ ಸಾಗುವಳಿದಾರರ ಸಮಸ್ಯೆಗೆ ಪರಿಹಾರವಾಗಿ ಒನ್ ಟೈಮ್ ಸೆಟಲ್ ಮೆಂಟ್ ಜಾರಿ ಮಾಡುವ ಮೂಲಕ ಭೂಮಿ ಹಕ್ಕು ಮಾನ್ಯ ಮಾಡಬೇಕು. ವಿಲೇ ವಾರಿ ಹೆಸರಿನಲ್ಲಿ ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸಬೇಕು.
ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ದ ಹಕ್ಕು ಸಿಗಬೇಕು. ಭೂ ಕಂದಾಯ ಕಾನೂನಿಗೆ ತಿದ್ದುಪಡಿ ಮಾಡುವ ಮೂಲಕ ಬಡ ಜನರಿಗೆ ಭೂಮಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು.

ವಸತಿ ಹೀನರಿಗೆ ರಾಜ್ಯ ವ್ಯಾಪಿ ಸಮಗ್ರ ಮೆಗಾ ವಸತಿ ಯೋಜನೆ ಘೋಷಣೆ ಮಾಡಬೇಕು, ಅರ್ಜಿ ಸಲ್ಲಿಸಿ-ಸಾಗುವಳಿ ಮಾಡುತ್ತಿರುವ ಭೂಹೀನರಿಗೆ ಮಾನದಂಡದ ಮೇಲೆ ಭೂಮಿ ಮಂಜೂರಾತಿ ನೀಡಬೇಕು. ಸಾಗುವಳಿ ಚೀಟಿ ಹೊಂದಿರುವವ ರೆಲ್ಲರಿಗೂ ಕೂಡಲೇ ಪಹಾಣಿ ಒದಗಿಸಬೇಕು. ಅರ್ಜಿ ಸಲ್ಲಿಸಿರುವ ಯಾರನ್ನು ಯಾವ ಭೂಮಿ ಯಿಂದಲೂ ಒಕ್ಕಲೇಳಿಸಬಾರದು ಎಂದು ಮನವಿ ಮಾಡಿದರು.

ಜಿಲ್ಲೆಯ ಭೂಮಿ ವಸತಿ ಸಮಸ್ಯೆಗಳ ಹೋರಾಟಗಾರರನ್ನೂ ಒಳಗೊಂಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಗಳೊಂದಿಗೆ ತುರ್ತಾಗಿ ಸಭೆ ನಡೆಸಬೇಕು ಮತ್ತು ಸಭೆಯ ತೀರ್ಮಾನಗಳನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಆಂಜನೇಯ ಕುರುಬದೊಡ್ಡಿ, ಲಕ್ಷ್ಮಣ ಮಂಡಲಗೇರಾ, ಗೋವಿಂದ ದಾಸ್, ಬಂಗಾರಿ ನರಸಿಂಹಲು, ಹುಲಿಗೆಪ್ಪ ಕೆಆರ್‌ಎಸ್, ಗುರುರಾಜ ಗ್ರೂಕೂಸೌ ಸೇರಿದಂತೆ ಅನೇಕರು ಇದ್ದರು.