ಅಮೀನಪಾಷಾ ದಿದ್ದಗಿ 
ರಾಯಚೂರು

ಜೋಳ ಖರೀದಿ ಮಿತಿ ಹೆಚ್ಚಿಸಲು ಒತ್ತಾಯ

ನರೇಶ್ ಕುಮಾರ್
ಸಿಂಧನೂರು: ಮುಂಗಾರು ಜೋಳ ಖರೀದಿ ಮಿತಿಯನ್ನು 15 ಕ್ವಿಂ.ನಿಂದ 20 ಕ್ವಿಂ.ಗೆ ಹೆಚ್ಚಿಸಬೇಕೆಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಅಮೀನಪಾಷಾ ದಿದ್ದಗಿ ಒತ್ತಾಯಿಸಿದರು. 
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯ ಸರ್ಕಾರ ಎಕರೆಗೆ 15 ಕ್ವಿಂ. ಜೋಳ ಖರೀದಿಸಲು ನಿಗದಿಪಡಿಸಿದೆ. ಇದರಿಂದ ರೈತರು ಬೆಳೆದ ಎಲ್ಲ ಜೋಳ ಮಾರುವುದು ಕಷ್ಟವಾಗಿದೆ. ರೈತರು ಎಕರೆಗೆ ಕನಿಷ್ಠವೆಂದರೂ 30 ರಿಂದ 40 ಚೀಲ ಬೆಳೆಯುತ್ತಾರೆ. ಇದರಿಂದ ರೈತರು ಜೋಳ ಮಾರದೆ ತೊಂದರೆ ಅನುಭವಿಸುವಂತಾಗಿದೆ. 
ಸರ್ಕಾರ ರೈತರ ಪರ, ಕಾರ್ಪೋರೇಟ್ ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದರು. ಸರ್ಕಾರ ಕೂಡಲೇ ಜೋಳ ಖರೀದಿ ನೋಂದಣಿ ಆರಂಭಿಸಬೇಕು. 15 ಕ್ವಿಂ. ಬದಲು 20 ಕ್ವಿಂಟಲ್ ಖರೀದಿಗೆ ಆದೇಶಿಸಬೇಕು. ಜ.3ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಕಂಡ ಕಂಡಲ್ಲಿ ರೈತರು ಸಚಿವರಿಗೆ  ಕಪ್ಪು ಬಾವುಟ ಪ್ರದರ್ಶನ ಮಾಡಲಿದ್ದಾರೆ. 
ಕಳಪೆ ಭತ್ತದ ಬೀಜ ನೀಡಿ, ನಷ್ಟಕ್ಕೆ ಕಾರಣವಾದವರ ವಿರುದ್ಧ ಕ್ರಮಕೈಗೊಂಡು ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. 
ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಹಂಚಿನಾಳ, ಖಾಜಾಸಾಬ್ ಜಾಲಿಹಾಳ, ಹುಚ್ಚಪ್ಪ, ಅಣ್ಣಪ್ಪ ಜಾಲಿಹಾಳ, ಯುಸೂಫ್‌ಸಾಬ್ ಕುನ್ನಟಗಿ, ಇಸ್ಮಾಯಿಲ್‌ಸಾಬ್ ಕುನ್ನಟಗಿ ಇದ್ದರು.