ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಂಎಲ್ಸಿ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಮಂಗಳವಾರ ಜಿಲ್ಲಾ ನಾಗರಿಕರ ಜಾಗೃತಿ ವೇದಿಕೆ ವತಿಯಿಂದ ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು. ಅಧ್ಯಕ್ಷ ರಾಜೇಶ್ ಕುಮಾರ್, ಬೆಲಂ ಶ್ರೀಧರರೆಡ್ಡಿ , ಸುಭಾಶ್, ವೆಂಕಟರೆಡ್ಡಿ, ಮಸ್ತಾನ್, ಸಾಧಿಕ್, ಪ್ರವೀಣರೆಡ್ಡಿ, ನರಸಿಂಹಲು, ಮಹಾಲಿಂಗ, ಚೇತನ ಕಡಗೋಲ್, ಸುರೇಶ ಹೇಮಕೋಟೆ, ಆಂಜನೇಯ, ರಘು ಮಡಿವಾಳ, ನಾಗರಾಜಸ್ವಾಮಿ, ಕಿರಣ್ ಕುಮಾರ ಇದ್ದರು.
ರಾಯಚೂರು
ಜಿಲ್ಲೆಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಎಂಎಲ್ಸಿ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಿ, ಜಿಲ್ಲಾ ಉಸ್ತುವಾರಿ ಸಚಿರನ್ನಾಗಿ ನೇಮಕ ಮಾಡಲು ಒತ್ತಾಯಿಸಿ ಮಂಗಳವಾರ ಜಿಲ್ಲಾ ನಾಗರಿಕರ ಜಾಗೃತಿ ವೇದಿಕೆ ವತಿಯಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಕ್ತದಲ್ಲಿ ಪತ್ರ ಬರೆದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ರಕ್ತದ ಸಹಿಯೊಂದಿಗೆ ಮನವಿ ಸಲ್ಲಿಸಲಾಯಿತು.
ಎನ್.ಎಸ್. ಬೋಸರಾಜು ಅವರು ಕಳೆದ ಮೂರು ವರ್ಷಗಳ ಸಚಿವರ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದು, ನೀರಾವರಿ ಯೋಜನೆಗಳು, ರಸ್ತೆ ಕಾಮಗಾರಿಗಳು, ಗ್ರೀನ್‌ಫೀಲ್ಡ್ ಯೋಜನೆ, ವಿಮಾನ ನಿಲ್ದಾಣ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ತಂದು ಹಲವು ಮಹತ್ವದ ಕಾಮಗಾರಿಗಳಿಗೆ ಚಾಲನೆ ನೀಡಿ ಅವುಗಳಿಗೆ ವೇಗ ನೀಡಿದ್ದಾರೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಎನ್.ಎಸ್. ಬೋಸರಾಜು ಅವರಿಗೆ ಪುನಃ ಸಚಿವ ಸ್ಥಾನ ನೀಡುವುದರ ಜತೆಗೆ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರ ಜವಾಬ್ದಾರಿಯನ್ನೂ ವಹಿಸಬೇಕು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ರಾಜೇಶ್ ಕುಮಾರ್, ಬೆಲಂ ಶ್ರೀಧರರೆಡ್ಡಿ , ಸುಭಾಶ್, ವೆಂಕಟರೆಡ್ಡಿ, ಮಸ್ತಾನ್, ಸಾಧಿಕ್, ಪ್ರವೀಣರೆಡ್ಡಿ, ನರಸಿಂಹಲು, ಮಹಾಲಿಂಗ, ಚೇತನ ಕಡಗೋಲ್, ಸುರೇಶ ಹೇಮಕೋಟೆ, ಆಂಜನೇಯ, ರಘು ಮಡಿವಾಳ, ನಾಗರಾಜಸ್ವಾಮಿ, ಕಿರಣ್ ಕುಮಾರ ಸೇರಿದಂತೆ ಅನೇಕರು ಇದ್ದರು.