ಗ್ರಾಮ ಪಂಚಾಯತ ನೌಕರರ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಗುರುವಾರ ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ಮಾಡಿದರು. ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮನ್ಸಲಾಪೂರು, ಕಾರ್ಯದರ್ಶಿ ಅಂಜಿನಯ್ಯ , ಖಜಾಂಚಿ ಪಾಂಡುರಂಗ ನಾಯಕ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಗಿರಿಯಪ್ಪ ಪೂಜಾರಿ, ಮುಖಂಡರಾದ ಸುರೇಶ ಇದ್ದರು.
2025ರ ಡಿ.21ರಂದು ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಅಧಿಕಾರಿಗಳು ಬಂದು ಪಂಚಾಯತ ನೌಕರರ ಬೇಡಿಕೆಗಳ ಕುರಿತು ಡಿ.22ರಂದು ಸಂಘಟನೆಯ ಮುಖಂಡರನ್ನು ಸಭೆ ಕರೆದು ಮೂರು ಗಂಟೆಗಳ ಕಾಲ ಸುದೀರ್ಘವಾಗಿ ಒಂದೊಂದೆ ಬೇಡಿಕೆಗಳ ಕುರಿತು ಚರ್ಚೆ ನಡೆಸಿದ್ದೀರಿ. ಇದರಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಸಚಿವರ ಜೊತೆ ಸಭೆಯನ್ನು ನಡೆಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಉಳಿದ ನಮ್ಮ ಹಂತದಲ್ಲಿರುವ ಪ್ರಮುಖ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸಿ ಆದೇಶವನ್ನು ನೀಡಲಾಗುವುದೆಂದು ಚರ್ಚೆ ಮಾಡಿ ನಂತರ ಧರಣಿ ನಿರತ ಸ್ಥಳಕ್ಕೆ ಬಂದು ಭರವಸೆಯನ್ನು ಕೊಟ್ಟಿದ್ದರಿಂದ ಆ ಭರವಸೆ ಮೇರೆಗೆ ನಮ್ಮ ಧರಣಿ ವಾಪಸ್ ಪಡೆದುಕೊಂಡಿದ್ದು ಆದರೆ ಈವರೆಗೆ ಪ್ರಮುಖ ಬೇಡಿಕೆಗಳು ಈಡೇರಿಲ್ಲ ಎಂದರು.
ಮಾತುಕತೆ ನಡೆಸಿದ್ದರೂ 19 ಬೇಡಿಕೆಗಳಲ್ಲಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಪ್ರಮುಖವಾಗಿ ರುವ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ತಾವು ನೀಡಿದ ಭರವಸೆ ಸಾಕಾರವಾಗಿಲ್ಲ. ಇಲ್ಲಿವರೆಗೆ ಒಂದೇ ಒಂದು ಬೇಡಿಕೆ ಈಡೇರಿಸದೇ ಇರುವುದು ವಿಷಾದನೀಯ. ಕೂಡಲೇ ರೂ.5000 ಎಲ್ಲ ನೌಕರರಿಗೆ ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು.ನೌಕರರು ನಿವೃತ್ತಿ/ನಿಧನ ಹೊಂದಿದರೆ ಅವರಿಗೆ ಇಡಗಂಟು 6 ಲಕ್ಷ ರೂ. ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ತಾವು ಭರವಸೆ ನೀಡಿದ ಭಾಗವಾಗಿ ಸ್ವಚ್ಛವಾಹಿನಿ ನೌಕರರ ಸಭೆಯನ್ನು ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಮನ್ಸಲಾಪೂರು, ಕಾರ್ಯದರ್ಶಿ ಅಂಜಿನಯ್ಯ , ಖಜಾಂಚಿ ಪಾಂಡುರಂಗ ನಾಯಕ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಸ್.ಶರಣಬಸವ, ಗಿರಿಯಪ್ಪ ಪೂಜಾರಿ, ಮುಖಂಡರಾದ ಸುರೇಶ , ವೀರೇಶ್, ಪಂಚಯ್ಯ ಕರಿಗಾರ, ಆಂಬಣ್ಣನಾಯಕ, ಚಂದು , ಸುಭಾನ್ ಸಾಬ್, ಶಿವಪ್ಪ ನಾಯಕ, ವೆಂಕಪ್ಪ, ಶರಣಬಸವ, ಷಣ್ಮಖಪ್ಪ ನಾಯಕ, ಶಿವರಾಜ ಸ್ವಾಮಿ, ಈರಪ್ಪ, ಹೊನ್ನಪ್ಪ ನಾಯಕ ಸೇರಿ ಅನೇಕರು ಇದ್ದರು.