ಮಾನ್ವಿ ವೃತ್ತಗಳಲ್ಲಿ ಮಹನೀಯರ ಪುತ್ಥಳಿ ಪ್ರತಿಷ್ಠಾಪನೆಗೆ ಆಗ್ರಹಿಸಿ ಹೋರಾಟ ಸಮಿತಿಯಿಂದ ಧರಣಿ ನಡೆಯಿತು. ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಪ್ರಮುಖರಾದ ನಕ್ಕುಂದಿ ಬಸವರಾಜ, ಸುರೇಶ್ ನಾಡಗೌಡ, ಬಸವಪ್ರಭು ಕರಡಿಗುಡ್ಡ ಇತರರಿದ್ದರು. 
ರಾಯಚೂರು

ಮಹನೀಯರ ಪುತ್ಥಳಿ ಶೀಘ್ರ ಪ್ರತಿಷ್ಠಾಪಿಸಲಿ

ಪ್ರಮುಖ ಮುಖ್ಯಾಂಶಗಳು

  • ಹೋರಾಟ ಸಮಿತಿ ಅಗ್ರಹ
  • ಮಾನ್ವಿ ಮಹಾತ್ಮ ಗಾಂಧಿ ವೃತ್ತದಲ್ಲಿ ಧರಣಿ
ಮಾನ್ವಿ: ಬಸವ, ಅಂಬೇಡ್ಕರ್ ಮತ್ತು ವಾಲ್ಮೀಕಿ ಸೇರಿದಂತೆ ವಿವಿಧ ವೃತ್ತಗಳಲ್ಲಿ ಮಹನೀಯರ ಪುತ್ಥಳಿಗಳನ್ನು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿ ಪುತ್ಥಳಿ ಸ್ಥಾಪನೆ ಹೋರಾಟ ಸಮಿತಿಯಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಧರಣಿ ನಡೆಸಲಾಯಿತು. 
ವಿವಿಧ ಮಹನೀಯರ ಪುತ್ಥಳಿಗಳನ್ನು ಪ್ರತಿಷ್ಠಾಪಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮವಹಿಸಿಲ್ಲ. ಕಲ್ಮಲಾದಿಂದ ಸಿಂಧನೂರುವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಕಾರ್ಯ ಶೇ.80 ಪೂರ್ಣವಾಗಿದ್ದರೂ ಗುತ್ತಿಗೆ ಸಂಸ್ಥೆ ಹಾಗೂ ಕೆಎಸ್‌ಆರ್‌ಡಿಸಿ ಅಧಿಕಾರಿಗಳು ಮಹನೀಯರ ವೃತ್ತಗಳ ಅಭಿವೃದ್ಧಿ ಹಾಗೂ ಪುತ್ಥಳಿಗಳ ಸ್ಥಾಪನೆ ಕುರಿತು ಯಾವುದೆ ಕ್ರಮ ಕೈಗೊಂಡಿಲ್ಲ. ಇನ್ನೂ 10 ದಿನಗಳಲ್ಲಿ ಪಟ್ಟಣದ ವೃತ್ತಗಳನ್ನು ಅಭಿವೃದ್ಧಿಪಡಿಸಿ ಪುತ್ಥಳಿಗಳನ್ನು ಪ್ರತಿಷ್ಠಾಪಿಸದಿದ್ದಲ್ಲಿ ಎಲ್ಲ ಸಮುದಾಯದವರು ಸೇರಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು. 
ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಪ್ರಮುಖರಾದ ರವಿಕುಮಾರ್ ಸಾಹುಕಾರ ಆಲ್ದಾಳ, ವಿಶ್ವನಾಥ್, ವೀರನಗೌಡ ಪೋತ್ನಾಳ, ಮುತ್ತುರಾಜ್ ಶೆಟ್ಟಿ, ಕುಮಾರಸ್ವಾಮಿ, ನಾಗರಾಜ್ ಶೆಟ್ಟಿ, ನಕ್ಕುಂದಿ ಬಸವರಾಜ, ಸುರೇಶ್ ನಾಡಗೌಡ,  ಸುಧಾಕರ, ತಿಮ್ಮರೆಡ್ಡಿ ಭೋಗಾವತಿ, ಶರಣಗೌಡ ನಕ್ಕುಂದಿ, ರಂಗಪ್ಪ, ಹರಿಹರ ಪಾಟೀಲ್, ಉಮೇಶ ಸಜ್ಜನ್, ಗುರುಸಿದ್ದಪ್ಪ ಕಣ್ಣೂರು, ಹನುಮೇಶ ನಾಯಕ ಸಾದಾಪುರ, ಬಿ.ಈರಣ್ಣ, ಶಾಂತಿಲಾಲ್ ಸೇಠ್ ಇತರರಿದ್ದರು. 
ಧರಣಿ ಮೊಟಕು: ಹೋರಾಟ ಸಮಿತಿ ಪ್ರಮುಖರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ತಹಸೀಲ್ದಾರ್ ಭೀಮರಾಯ ರಾಮಸಮುದ್ರ ತಹಸಿಲ್ ಕಚೇರಿಗೆ ಕರೆಸಿ ಚರ್ಚಿಸಿದರು. ಪುತ್ಥಳಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ತಾಲೂಕು ಸರ್ವೇಯರ್, ಪುರಸಭೆ ಮುಖ್ಯಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲಿಸಿ ಸ್ಥಳ ಗುರುತಿಸಲು ನಿರ್ಣಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಧರಣಿ ವಾಪಸ್ ಪಡೆಯುವಂತೆ ತಹಸೀಲ್ದಾರ್ ಮನವಿ ಮೇರೆಗೆ ಹೋರಾಟ ಹಿಂದಕ್ಕೆ ಪಡೆಯಲಾಯಿತು.