ಕವಿತಾಳದಲ್ಲಿ ಸಿರವಾರ ತಹಸೀಲ್ದಾರ್ ಅಶೋಕ ಪವಾರ್‌ಗೆ ಹೋರಾಟಗಾರರು ಮನವಿ ಸಲ್ಲಿಸಿದರು.ಕಲ್ಮಠದ ಸಿದ್ಧಲಿಂಗಸ್ವಾಮಿ. ಫಾ.ಆರೋಗ್ಯಧಾಮಿ, ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ತ್ರಯಂಬಕೇಶ್ವರ ದೇವಸ್ಥಾನದ ಅಧ್ಯಕ್ಷ ಗಂಗಪ್ಪ ದಿನ್ನಿ, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಯಮನಪ್ಪ ದಿನ್ನಿ, ಪಪಂ ಸದಸ್ಯರಾದ ಮಲ್ಲಿಕಾರ್ಜುನಗೌಡ, ರಾಘವೇಂದ್ರ ಶೆಟ್ಟಿ, ನಿಂಗರಾಜ ಕಂದಗಲ್ ಇತರರಿದ್ದರು.
ಕವಿತಾಳ: ಪಟ್ಟಣವನ್ನು ತಾಲೂಕು ಕೇಂದ್ರ ಮಾಡಬೇಕೆಂದು ಒತ್ತಾಯಿಸಿ ಕವಿತಾಳ ಮತ್ತು ಸುತ್ತಲಿನ ಗ್ರಾಮಗಳ ಜನರು ಮಂಗಳವಾರ ಪ್ರತಿಭಟನೆ ನಡೆಸಿ ಸಿರವಾರ ತಹಸೀಲ್ದಾರ್ ಅಶೋಕ ಪವಾರ್‌ಗೆ ಮನವಿ ಸಲ್ಲಿಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದ ಪ್ರತಿಭಟನಾಕಾರರು, ಆನ್ವರಿ ಕ್ರಾಸ್‌ನ ಕನಕ ವೃತ್ತದಲ್ಲಿ ಸಮಾವೇಶಗೊಂಡರು. ಕವಿತಾಳ ಹೋಬಳಿ 69 ಗ್ರಾಮಗಳಿಗೆ ಕೇಂದ್ರಸ್ಥಾನವಾಗಿದೆ. ಭೌಗೋಳಿಕವಾಗಿ ದೊಡ್ಡದಾಗಿದೆ. ಪಟ್ಟಣದಲ್ಲಿ ಪೊಲೀಸ್ ಠಾಣೆ, ಕಂದಾಯ ಇಲಾಖೆ, ಸಾಮುದಾಯ ಆರೋಗ್ಯ ಕೇಂದ್ರ, ಪದವಿ ಕಾಲೇಜು, ನೀರಾವರಿ ಇಲಾಖೆ ಸೇರಿದಂತೆ ಮೂಲ ಸವಲತ್ತುಗಳಿದ್ದು, ತಾಲೂಕು ಆಗಲು ಸೂಕ್ತವಾಗಿದೆ. ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕವಿತಾಳ ತಾಲೂಕು ಕೇಂದ್ರ ಘೋಷಿಸಬೇಕೆಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ಸಿರವಾರ ತಹಸೀಲ್ದಾರ್ ಅಶೋಕ ಪವಾರ್ ಮಾತನಾಡಿ, ನಿಮ್ಮ ಬೇಡಿಕೆಯನ್ನು ಮುಖ್ಯಮಂತ್ರಿಗೆ ತಿಳಿಸಲಾಗುವುದು. ಹೋರಾಟ ಕೈ ಬಿಡಬೆಕು ಎಂದು ಮನವಿ ಮಾಡಿದರು. ಇದಕ್ಕೆ ಒಪ್ಪಿದ ಹೋರಾಟಗಾರರು, ಪ್ರತಿಭಟನೆ ಕೈಬಿಟ್ಟು ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಅಯ್ಯಪ್ಪ ನಿಲೋಗಲ್, ಬಸಪ್ಪ ಕಂದಗಲ್, ಬಲವಂತರಾಯಗೌಡ ವಟಗಲ್, ನಿಂಗಪ್ಪ ತೋಳ. ಅಲ್ಲಮ ಪ್ರಭು, ಮಲ್ಲಪ್ಪ ಕಲಾಶೆಟ್ಟಿ, ಹುಚ್ಚಪ್ಪ ಬುಳ್ಳಾಪುರ, ಅಂಜಪ್ಪ ಬುಳ್ಳಾಪುರ, ಎಂ.ಡಿ. ಮೆಹಬೂಬ್, ಮೌನೇಶ ಕೊಡ್ಲಿ, ಈರಣ್ಣ ಕೆಳಗೇರ, ನೀಲಕಂಠ ಭೋವಿ, ಬಸವರಾಜ ಕರೀಂಸಾಬ್, ರಾಜು ಕಟ್ಟಿಮನಿ, ಕಿರಿಲಿಂಗ ಮ್ಯಾಗಳಮನಿ ಇತರರಿದ್ದರು.