ರಾಯಚೂರಿನ ಐತಿಹಾಸಿಕ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಬುಧುವಾರ ಭೇಟಿ ನೀಡಿ ಪರಿಶೀಲಿಸಿದರು. ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮಹೋಪಾತ್ರ , ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾಧಿಕಾರಿ ಆನಂದ ರೆಡ್ಡಿ, ಕೆರೆ ಇಂಜಿನಿಯರ್ ಬಸವರಾಜ ಇದ್ದರು. 
ರಾಯಚೂರು

ಮಾವಿನ ಕೆರೆಗೆ ಡಿಸಿ ಭೇಟಿ: ಪರಿಶೀಲನೆ

ರಾಚಯ್ಯ ಸ್ವಾಮಿ
ರಾಯಚೂರು
ನಗರದ ಐತಿಹಾಸಿಕ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಪೂವಿತಾ ಎಸ್. ಬುಧುವಾರ ಭೇಟಿ ನೀಡಿ ಪರಿಶೀಲಿಸಿದರು.

ಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿ ಮಾತನಾಡಿ, ಕೆರೆ ಅಭಿವೃದ್ಧಿ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿಗೆ ಯಾವುದೇ ಅಡೆತಡೆ ಬಂದರೆ ಕೂಡಲೇ ಜಿಲ್ಲಾಡಳಿತವನ್ನು ಸಂಪರ್ಕ ಮಾಡಬೇಕು. ಹಾಗೂ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಬೇಕೆಂದು ಸಂಬಅಧಿಸಿದ ಇಲಾಖೆಯ ಅಧಿಕಾರಿಗಳಿಗೆಸೂಚನೆ ನೀಡಿದರು.

ನಂತರ ಸಂಬಅಧಿಸಿದ ಇಲಾಖೆಯ ಅಧಿಕಾರಿಗಳಿಂದ ಕೆರೆಯ ವಿಸ್ತರಣೆ ಮಾಹಿತಿಯನ್ನು ಪಡೆದರು. ಮಾವಿನಕೆರೆಗೆ ಬೇರೆ ಬೇರೆ ಕಡೆಗಳಿಂದ ಗಟಾರು ನೀರು ಕೆರೆಗೆ ಹರಿದು ಬರದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಕೆರೆಗೆ ಕಸ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸಂಬಅಧಿಸಿದ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮಹೋಪಾತ್ರ , ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾಧಿಕಾರಿ ಆನಂದ ರೆಡ್ಡಿ, ಕೆರೆ ಇಂಜಿನಿಯರ್ ಬಸವರಾಜ ಸೇರಿದಂತೆ ಗುತ್ತೇದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.