ಬಷೀರ ಅಹ್ಮದ್ ಹೊಸಮನಿ  
ರಾಯಚೂರು

ಜ.11 ರಂದು ದನಿಗೂಡು ಹನಿಗವನ ಸಂಕಲನ ಬಿಡುಗಡೆ

ರಾಯಚೂರು ಹೊಸಮನಿ ಪ್ರಕಾಶನದಿಂದ ಜ.11 ರಂದು ಬೆಳಗ್ಗೆ 10 ಗಂಟೆಗೆ ದನಿಗೂಡು ಹನಿಗವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಟ್ಯಾಗೋರ ಭವನದಲ್ಲಿ ಆಯೋಜನೆ ಮಾಡಲಾಗಿದೆಂದು ಪ್ರಕಾಶನದ ಅಧ್ಯಕ್ಷ ಬಷೀರ ಅಹ್ಮದ್ ಹೊಸಮನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಹಿರಿಯ ಸಾಹಿತಿ ವೀರಹನುಮಾನ ಉದ್ಘಾಟಿಸಲಿದ್ದಾರೆ. ಕೃತಿಯನ್ನು ಹಿರಿಯ ಸಾಹಿತಿ ಮಹಾಂತೇಶ ಮಸ್ಕಿ ಲೋಕಾರ್ಪಣೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ತಾಯರಾಮ ಮರ್ಚಟ್ಟಾಳ ವಹಿಸಲಿದ್ದಾರೆ. ಕೃತಿಯ ಕುರಿತು ಹಿರಿಯ ಕವಿ ವೈ.ಬಿ.ಹಾಲಭಾವಿ ಪರಿಚಯಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರುನಾಥ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ಭೀಮನಗೌಡ ಇಟಗಿ, ಎಸ್‌ಆರ್‌ಕೆ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ವಿರೂಪಾಕ್ಷಿ. ಬಿ.ಎಂ, ಗಡಿನಾಡು ಕನ್ನಡ ಸಂಘದ ಅಧ್ಯಕ್ಷ ನಿಜಾಮುದ್ದೀನ್, ಕನ್ನಡ ಕ್ರಿಯಾ ಸಮಿತಿ ಕಾರ್ಯದರ್ಶಿ ರಾಮಣ್ಣ ಮ್ಯಾದಾರ, ಮಾಡಗಿರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ವಿರುಪಾಕ್ಷಿ ಆಗಮಿಸಲಿದ್ದಾರೆ. ಬಷೀರ ಕೃತಿಯ ಸಂಪಾದಕ ಬಷೀರ ಅಹ್ಮದ ಹೊಸಮನಿ, ಪ್ರಕಾಶನದ ಉಪಾಧ್ಯಕ್ಷೆ ಪರ್ವಿನ ಬೇಗಂ ಹೊಸಮನಿ ಉಪಸ್ಥಿತಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಮಣ್ಣ ಮ್ಯಾದಾರ, ಬಸವರಾಜ ಮಿಮಿಕ್ರಿ, ಪರ್ವಿನ್ ಬೇಗಂ, ಸಾಯಿ ಕುಮಾರ ಇದ್ದರು.