ರಾಯಚೂರು
ಭೂಮಿ,ವಸತಿ, ಬ್ಯಾಕ್‌ಲಾಗ್ ಹುದ್ದೆಗಳ ನೇಮಕಾತಿ ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ ನೇತೃತ್ವದಲ್ಲಿ ಜು.3 ಬೆಂಗಳೂರಿನ ಸ್ವತಂತ್ರ ಉದ್ಯಾವನದಲ್ಲಿ ದಲಿತ ಜನಾಗ್ರಹ ಸಮಾವೇಶ ಆಯೋಜಿಸಿದೆಂದು ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಆಂಜಿನೇಯ್ಯ ಜಂಗ್ಲೀಕರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹತ್ತಾರು ವರ್ಷಗಳಿಂದ ದಲಿತ ಸಮುದಾಯಗಳ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ದುರ್ಬಳಕೆ, ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಲೆವೆ. ಭೂಮಿ ಮತ್ತು ವಸತಿ ವಂಚಿತರಿಗೆ ಸಂವಿಧಾನ ಬದ್ದ ಹಕ್ಕು ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ. ದಲಿತ ಉದ್ದಾರ ಮಾಡಿರುವದಾಗಿ ಹೇಳುವ ಸರ್ಕಾರಗಳು ವಿಶೇಷ ಘಟಕ ಯೋಜನೆಯ 200 ಕೋಟಿ ರೂ ಅನುದಾನವನ್ನು ಸಾರಿಗೆ ಸಿಬ್ಬಂದಿಗಳ ವೇತನಕ್ಕೆ ನಿಯಮ ಬಾಹಿರವಾಗಿ ಬಳಸಲಾಗಿದೆ.
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಪರಿಶಿಷ್ಟರ ಭೂ ರಹಿತ ಪ್ರತಿ ಕುಟುಂಬಕ್ಕೆ, ಎರಡು ಎಕರೆ ಕೃಷಿ ಭೂಮಿ ಹಂಚಿಕೆ ಮಾಡಬೇಕು. ಆರ್ಥಿಕ ಹಿಂದುಳಿದ ಸಾಮಾನ್ಯ ವರ್ಗದರಿಗೆ ಜಾರಿಗೊಳಿಸಲಾದ ಶೇ.10 ಮೀಸಲಾತಿ ರದ್ದುಗೊಳಿಸುವದು ಸೇರಿದಂತೆ ಹತ್ತಾರು ಬೇಡಿಕೆಗಳಿಗೆ ಆಗ್ರಹಿಸಿ ಸಮಾವೇಶ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗೋವಿಂದ ಗಟ್ಟು ,ಆನಂದ, ಜ್ಞಾನರಾಜ ಇದ್ದರು.