ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ ಕ್ರಸ್ಟ್‌ಗೇಟ್ ಕಾಮಗಾರಿಯನ್ನು ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಭಾನುವಾರ ವೀಕ್ಷಣೆ ಮಾಡಿದರು. ಜಲಾಶಯದ ಸಿಇ ಲಕ್ಷ್ಮಣನಾಯಕ, ಇ.ಇ ಚಂದ್ರಶೇಖರ್, ಬಸವರಾಜ ಹಿರೇಗೌಡರ್ ಇತರರಿದ್ದರು. 
ರಾಯಚೂರು

ಕ್ರಸ್ಟ್‌ಗೇಟ್ ಅಳವಡಿಕೆ, ಏಪ್ರಿಲ್‌ಗೆ ಅಂತಿಮ ರೂಪ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಏಪ್ರಿಲ್
  • ವೇಳೆಗೆ
  • ಅಂತಿಮ
ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ತುಂಗಭದ್ರಾ ಜಲಾಶಯಕ್ಕೆ ಭೇಟಿ
ಸಿಂಧನೂರು: ಈಗಾಗಲೇ ತುಂಗಭದ್ರಾ ಜಲಾಶಯದ 33 ಕ್ರಸ್ಟ್‌ಗೇಟ್‌ಗಳ ಪೈಕಿ 19ನೇ ಗೇಟ್ ಅಳವಡಿಕೆ ಕಾರ್ಯ ಮುಗಿದಿದೆ. ಉಳಿದ ಗೇಟ್‌ಗಳ ಜೋಡಣೆ ಕಾರ್ಯ ಚುರುಕಾಗಿ ಸಾಗಿದ್ದು ಏಪ್ರಿಲ್ ವೇಳೆಗೆ ಅಂತಿಮ ರೂಪ ಪಡೆಯಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಕ್ರಸ್ಟ್‌ಗೇಟ್ ಕಾಮಗಾರಿ ವೀಕ್ಷಿಸಲಾಗಿದೆ. ಕ್ರಸ್ಟ್‌ಗೇಟ್ ಸಂಖ್ಯೆ 11, 18, 20, 24, 27, 28 ಕಾಮಗಾರಿ ಶೇ.90 ಮುಗಿದಿದೆ. 4, 19, 28 ಗೇಟ್ ಕಾಮಗಾರಿ ಶೇ.80 ಹಾಗೂ 1, 7, 33, 17 ಗೇಟ್‌ಗಳಲ್ಲಿ ಶೇ.60 ಹಳೇ ಗೇಟ್ ಕಟಿಂಗ್ ಆಗಿ, ಕಾಮಗಾರಿ ನಡೆದಿದೆ.
12 ಗೇಟ್‌ಗಳ ಕಟಿಂಗ್ ನಡೆದಿದೆ. ಎಲ್ಲ ಕ್ರಸ್ಟ್‌ಗೇಟ್‌ಗಳ ಕಾಮಗಾರಿಗಳು ಹಂತ ಹಂತವಾಗಿ ನಡೆಯುತ್ತಿದೆ. ಒಂದು ಕ್ರಸ್ಟ್ ಗೇಟ್ 49 ಟನ್ ತೂಕವಿದೆ. ಜಲಾಶಯದ ಕ್ರಸ್ಟ್‌ಗೇಟ್ ಕಾಮಗಾರಿಗಾಗಿ ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಮುಂಬರುವ ಬೆಳೆಗೆ ನೀರು ಹರಿಸುವ ನಿಟ್ಟಿನಲ್ಲಿ ಕ್ರಸ್ಟ್‌ಗೇಟ್ ಕಾಮಗಾರಿಯನ್ನು ಚುರುಕಿನಿಂದ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಟಿಬಿ ಬೋರ್ಡ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಫೆಬ್ರವರಿ ಕೊನೆ, ಇಲ್ಲವೇ ಏಪ್ರಿಲ್‌ಗೆ ಕಾಮಗಾರಿ ಮುಗಿದರೆ, ಮುಂಬರುವ ಮುಂಗಾರು ಬೆಳೆಗೆ ನೀರು ಹರಿಸಲು ಸಾಧ್ಯವಾಗುತ್ತದೆ ಎಂದರು. ತುಂಗಭದ್ರಾ ಜಲಾಶಯದ ಸಿಇ ಲಕ್ಷ್ಮಣನಾಯಕ, ಇಇ ಚಂದ್ರಶೇಖರ್, ಮುಖಂಡರಾದ ಬಸವರಾಜ ಹಿರೇಗೌಡರ್, ಎನ್.ಭೀಮನಗೌಡ ಗೊರೇಬಾಳ ಇದ್ದರು.