ರಾಯಚೂರಿನ ಇಂಡಿಯನ್ ಗ್ಯಾಸ್ ಏಜೆನ್ಸಿ ಬಳಿ ಶುಕ್ರವಾರ ಸಿಲಿಂಡರ್ ಪಡೆಯಲು ಗ್ರಾಹಕರ ಭಾರೀ ಸಂಖ್ಯೆಯಲ್ಲಿ ಜನ ಸೇರಿರುವುದು.
ರಾಯಚೂರು ಇರಾನ್- ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ರಾಷ್ಟ್ರದಲ್ಲಿ ಯುದ್ಧದ ಸನ್ನಿವೇಶದಿಂದ ವಾಣಿಜ್ಯ ಅಡಿಗೆ ಅನಿಲದ ಸಿಲಿಂಡರ್ ಪೂರೈಕೆಯನ್ನು ವ್ಯತ್ಯಯವಾಗಿದ್ದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದ್ದರಿಂದ ಗೃಹ ಬಳಕೆಯ ಸಿಲಿಂಡರ್ ಪಡೆಯಲು ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಇಂಡಿಯನ್ ಗ್ಯಾಸ್ ಏಜೆನ್ಸಿ ಬಳಿ ಶುಕ್ರವಾರ ಸಿಲಿಂಡರ್ ಪಡೆಯಲು ಗ್ರಾಹಕರ ಭಾರೀ ಸಂಖ್ಯೆಯಲ್ಲಿ ಜನಸಂದಣಿ ಕಂಡುಬಂದಿದ್ದು, ಕೆಲ ಹೊತ್ತು ನೂಕುನುಗ್ಗಲು ಪರಿಸ್ಥಿತಿ ಉಂಟಾಯಿತು. ಕಳೆದ ಮೂರು ದಿನಗಳಿಂದ ಸರ್ವರ್ ಸಮಸ್ಯೆ ಉಂಟಾಗಿ ಆನ್‌ಲೈನ್ ಮೂಲಕ ಗೃಹ ಬಳಕೆಯ ಸಿಲಿಂಡರ್ ಬುಕ್ಕಿಂಗ್ ಸರಿಯಾಗಿ ಆಗುತ್ತಿಲ್ಲ ಎಂಬ ಕಾರಣದಿಂದ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಅನೇಕರು ಮೊಬೈಲ್ ಹಾಗೂ ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಲು ಪ್ರಯತ್ನಿಸಿದರೂ ಸಿಲಿಂಡರ್ ಬುಕ ಆಗದೆ ತೊಂದರೆ ಎದುರಿಸುತ್ತಿರುವುದಾಗಿ ಗ್ರಾಹಕರು ಹೇಳುತಿದ್ದಾರೆ. ಆಹಾರ ಮತ್ತು ನಾಗರಿಕ ಸೊರಬರಾಜು ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಗೃಗ ಬಳಕೆ ಹಾಗೂ ವಾಣಿಜ್ಯ ಸೇರಿ ಒಟ್ಟು 11,647 ಸಿಲಿಂಡರ್ ಲಭ್ಯವಿದೆಂದು ಹೇಳುತ್ತಿದ್ದಾರೆ. ಆದರೆ ಜನರಲ್ಲಿ ಮಾತ್ರ ಆತಂಕ ಹೋಗುತ್ತಿಲ್ಲ.