ತಲೇಖಾನ್ ಗ್ರಾಪಂ ವ್ಯಾಪ್ತಿಯ ಹಡಗಲಿ ಲಿಂಬೇಪ್ಪನ ತಾಂಡಾದಲ್ಲಿ ವಿದ್ಯುತ್ ಕಂಬ ತುಂಡಾಗಿ ಬಾಗಿರುವುದು.
ಮುದಗಲ್: ಸಮೀಪದ ಹಡಗಲಿ ಲಿಂಬೇಪ್ಪನ ತಾಂಡಾದ ಹೊರವಲಯದಲ್ಲಿ ವಿದ್ಯುತ್ ಕಂಬ ತುಂಡಾಗಿ ಬಾಗಿದ್ದರಿಂದ ಕರೆಂಟ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಐದಾರು ದಿನಗಳಾದರೂ ದುರಸ್ತಿ ಮಾಡದ ಕಾರಣ ಬೆಳೆ ಹಾಗೂ ಜನಜಾನುವಾರುಗಳಿಗೆ ನೀರಿಲ್ಲದೆ ಪರದಾಡುವಂತಾಗಿದೆ.
ಲೈನ್ ಅವಲಂಬಿಸಿರುವ ರೈತರಿಗೆ ಕಳೆದ ಐದಾರು ದಿನಗಳಿಂದ ತೊಂದರೆಯಾಗುತ್ತಿದೆ. ಕೊಳವೆಬಾವಿ ನೀರು ಹರಿಸಿ ನೂರಾರು ಎಕರೆಯಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗಿದೆ. ಆದರೆ ಹಳ್ಳದಲ್ಲಿ ವಿದ್ಯುತ್ ಕಂಬ ಬಾಗಿದ್ದರಿಂದ ವೈರ್‌ಗಳು ಜೋತು ಬಿದ್ದಿವೆ. ಇದರಿಂದ ವಿದ್ಯುತ್ ಸರಬರಾಜನ್ನು ಜೆಸ್ಕಾಂ ಅಧಿಕಾರಿಗಳು ಕಡಿತಗೊಳಿಸಿದ್ದಾರೆ. ವಿದ್ಯುತ್ ಕಂಬ ದುರಸ್ತಿಗೊಳಿಸಲು ರೈತರು ಮನವಿ ಮಾಡಿದರೂ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ನೀರಿನ ಅಭಾವದಿಂದ ಬೆಳೆ ಒಣಗಲು ಆರಂಭಿಸಿವೆ. ಇದರಿಂದ ಹೊಲಗಳಲ್ಲಿ ವಾಸ ಮಾಡುವ ಜನರು, ಜಾನುವಾರುಗಳಿಗೆ ಕುಡಿವ ನೀರಿನ ತೊಂದರೆ ಉಂಟಾಗಿದೆ. ರೈತರಿಗೆ ಬೆಳೆ ಹಾಳಾಗುವ ಆತಂಕ ಎದುರಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವಿದ್ಯುತ್ ಕಂಬ ದುರಸ್ತಿ ಮಾಡಿಕೊಡಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕೋಟ್ಕರೆಂಟ್ ಕಂಬ ಬಾಗಿದರಿಂದ ಐದಾರು ದಿನಗಳಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಶೇಂಗಾ ಬೆಳೆ ಒಣಗಲಾರಂಭಿಸಿದೆ. ಕೂಡಲೇ ಅಧಿಕಾರಿಗಳು ವಿದ್ಯುತ್ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ರಡ್ಡೆಪ್ಪರೈತ, ಲಿಂಬೇಪ್ಪನ ತಾಂಡಾ
ವಿದ್ಯುತ್ ಕಂಬ ಬಾಗಿರುವ ಬಗ್ಗೆ ಮಾಹಿತಿ ಇದೆ. ಸಿಂಧನೂರು ವಿಭಾಗಾಧಿಕಾರಿಗಳಿಗೆ ಉಪಕರಣಗಳನ್ನು ನೀಡುವಂತೆ ಮನವಿ ಮಾಡಲಾಗಿದೆ. ಎರಡ್ಮೂರು ದಿನಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.