ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದೇವದುರ್ಗದ ಆಡಳಿತ ಸೌಧ ಮುಂದೆ ಬಜಾರ್ ಹಮಾಲಿ ಕಾರ್ಮಿಕರ ಸಂಘ ಪ್ರತಿಭಟನೆ ನಡೆಸಿತು. ತಾಲೂಕು ಅಧ್ಯಕ್ಷ ಮಹಮದ್ ಯೂಸೂಫ್, ಪ್ರಮುಖರಾದ ನರಸಣ್ಣ ನಾಯಕ, ಹನುಮಯ್ಯ ನಾಯಕ, ಶಬ್ಬೀರ್ ಜಾಲಹಳ್ಳಿ, ಹನುಮಂತ್ರಾಯ ಗಾಲಿ, ಯೂಸೂಫ್ ಗ್ವಾಡಿಕಾರ್ ಇತರರಿದ್ದರು.
- ಹಮಾಲಿ ಕಾರ್ಮಿಕ
- ಕಲ್ಯಾಣ ಮಂಡಳಿ
- ಪ್ರತಿಭಟನೆ
ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿ
ದೇವದುರ್ಗ: ಹಮಾಲಿ ಕಾರ್ಮಿಕರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿ ರಚಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಮಿನಿವಿಧಾನ ಸೌಧ ಮುಂದೆ ಹಮಾಲಿ ಕಾರ್ಮಿಕರ ಕಲ್ಯಾಣ ಮಂಡಳಿ ಬುಧವಾರ ಪ್ರತಿಭಟನೆ ನಡೆಸಿತು.
ಬಜಾರ್ ಹಮಾಲಿ ಕಾರ್ಮಿಕರು ಹಲವು ವರ್ಷಗಳಿಂದ ಜೀವನ ಭದ್ರತೆ ಇಲ್ಲದೆ ದುಡಿಯುತ್ತಿದ್ದು, ಮಾಲೀಕರು ಕೊಡುವ ಬಿಡಿಗಾಸೇ ಜೀವನಕ್ಕೆ ಆಸರೆಯಾಗಿದೆ. ಆದರೆ, ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸದೆ ಅನ್ಯಾಯ ಮಾಡಿದೆ. ಸಂತೆ ಬಜಾರ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಬಂದರುಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ಸದರಿ ಕಾರ್ಮಿಕರಿಗೆ ಅಪಘಾತ ಆಧಾರಿತ ಪರಿಹಾರ ಬಿಟ್ಟರೆ ಬೇರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ಜೀವನ ಭದ್ರತೆ ಇಲ್ಲದಂತಾಗಿದೆ ಎಂದು ದೂರಿದರು.
ರಾಜ್ಯದ ಲೋಡಿಂಗ್, ಅನ್‌ಲೋಡಿಂಗ್ ಹಮಾಲಿ ಕಾರ್ಮಿಕರಿಗೆ ಮಹಾರಾಷ್ಟ್ರ ಮಾದರಿಯಲ್ಲಿ ಉದ್ಯೋಗ ಭದ್ರತೆ ನೀಡಬೇಕು. ಸಹಜ ಸಾವಿಗೆ ತುತ್ತಾದರೆ 1ಲಕ್ಷ ರೂ., ಶವಸಂಸ್ಕಾರಕ್ಕೆ 25ಸಾವಿರ ರೂ. ಪರಿಹಾರ ನೀಡಬೇಕು. ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ, ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ನಿವೃತ್ತಿ ಪರಿಹಾರ, ಗ್ರ್ಯಾಚುಟಿ, ಇಡಿಗಂಟು, ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ವರ್ಷಕ್ಕೆ 2ಜೊತೆ ಸಮವಸ್ತ್ರ ನೀಡಬೇಕು. ಇ-ಶ್ರಮ ಕಾರ್ಡ್ ನೀಡಿ ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಮಹಮದ್ ಯೂಸೂಫ್, ಪ್ರಮುಖರಾದ ನರಸಣ್ಣ ನಾಯಕ, ಹನುಮಯ್ಯ ನಾಯಕ, ಶಬ್ಬೀರ್ ಜಾಲಹಳ್ಳಿ, ಹನುಮಂತ್ರಾಯ ಗಾಲಿ, ಯೂಸೂಫ್ ಗ್ವಾಡಿಕಾರ್ ಇತರರಿದ್ದರು.