ಮಹಾಂತೇಶ ಬಿರಾದಾರ 
ರಾಯಚೂರು

ಮತದಾರರ ಪಟ್ಟಿಯಿಂದ ಹೆಸರು ತೆಗೆದವರ ವಿರುದ್ಧ ಕೋರ್ಟ್ ಮೊರೆ


ನಗರದ ಪತ್ರಿಕ ಭವನದಲ್ಲಿ
ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಕಾರ್ಯಕಾರಿ ಸಮಿತಿಯ ಚುನಾವಣಾ ಅಧಿಸೂಚನೆಯನ್ನು ಏ.1ರಂದು ಹೊರಡಿಸಿದರೂ, ಸೂಚನಾ ಫಲಕಕ್ಕೆ ಏ.3ರಂದು ಹಾಕಲಾಗಿದೆ. ಇದೀಗ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಆದರೆ ಚುನಾವಣೆ ಕುರಿತು ಚುನಾವಣಾಧಿಕಾರಿಗಳು ಯಾವುದೇ ಪತ್ರಿಕಾ ಪ್ರಕಟಣೆಯಾಗಲಿ ನೀಡಿಲ್ಲ. ಬಹಳಷ್ಟು ಶಿಕ್ಷಕರಿಗೆ ಚುನಾವಣೆ ಇದೇ ಎಂಬುವುದೇ ತಿಳಿದಿಲ್ಲ ಎಂದರು.

ಕಳೆದ ಐದು ವರ್ಷಗಳ ಹಿಂದೆ ನಡೆದ ಶಿಕ್ಷಕರ ಚುನಾವಣೆಯಲ್ಲಿ ನಾನು ಸೇರಿ ಒಟ್ಟು 28 ಜನ ಶಿಕ್ಷಕರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಒಂದು ವೇಳೆ ನನ್ನ ಮತ್ತು ನನ್ನ ತಂಡದವರ ಹೆಸರು ಪಟ್ಟಿಯಲ್ಲಿದ್ದರೆ ಸೋಲು ಅನುಭವಿಸಬೇಕಾಗುತ್ತದೆ ಎಂಬ ಭಯದಿಂದ ಈಗಿನ ತಾಲೂಕಾಧ್ಯಕ್ಷ ಹಾಗೂ ರಾಜ್ಯ ಚುನಾವಣಾಧಿಕಾರಿಗಳು ಸೇರಿ ಈ ಕೆಲಸವನ್ನು ಮಾಡಿದ್ದಾ. ನ್ಯಾಯಕ್ಕಾಗಿ ನಾನು ನ್ಯಾಯಾಲಯದ ಮೊರೆ ಹೊಗಿರುವೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿ ಪ್ರಮಿಳಾ ಪಾಟೀಲ್ ಇದ್ದರು.